
ಕೊಪ್ಪಳ : ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅವಧಿಯ ಬಳಿಕ ಸಮಾಜಕ್ಕೆ ಏನಾದರೂ ಉತ್ತಮ ಕೊಡುಗೆ ನೀಡುವ ನಿಟ್ಟಿನಲ್ಲಿ ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂದು ಶಿಕ್ಷಕ ವಿನಯ್ ಮದರಿ ಹೇಳಿದರು. ಸ್ಥಳೀಯ ‘ಸೃಷ್ಠಿ ಹೋಂ ಕ್ಲಾಸಸ್’ ವತಿಯಿಂದ ಏರ್ಪಡಿಸಿದ್ದ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ನಿರ್ಭಯತೆ ಹಾಗೂ ಸರಸ್ವತಿ ಪೂಜಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ನಿತ್ಯ ಅಧ್ಯಯನಶೀಲರಾಗಬೇಕು ಅಂದಾಗ ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.
ವೇದಿಕೆಯ ಮೇಲೆ ಉಪಸ್ಥಿತರಿದ್ದ ಸಂಸ್ಥೆಯ ನಿರ್ದೇಶಕ ಶಿ. ಕಾ. ಬಡಿಗೇರ ಮಾತನಾಡಿ ಓದು ಸರ್ವಸ್ವವನ್ನೇ ತಂದು ಮುಂದಿಡುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚು ಗಮನಹರಿಸಲು ತಿಳಿ ಹೇಳಿದರು.
ಶಿಕ್ಷಕಿ ಅಕ್ಕಮ್ಮ ಸಾಲ್ಮನಿ ಮಾತನಾಡುತ್ತಾ ಯಾವುದೇ ವಿಷಯ ತಲೆಯಲ್ಲಿ ಉಳಿಯಬೇಕೆಂದರೆ ನಿತ್ಯ ಮನನ ಮಾಡುವುದು ಉತ್ತಮವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮತ್ತೊಬ್ಬ ಅತಿಥಿ ಮಾರುತಿ ಮಾತನಾಡಿ ನಿರಂತರ ಪ್ರಯತ್ನ ಒಂದು ಯಶಸ್ಸನ್ನು ತಂದುಕೊಡುವಲ್ಲಿ ಸಫಲವಾಗುತ್ತದೆ ಎಂದರು.
ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆಯಾಗಿ ಪರೀಕ್ಷಾ ಪ್ಯಾಡು ಹಾಗೂ ಪೆನ್ನುಗಳನ್ನು ವಿತರಿಸಲಾಯಿತು.
ವಿದ್ಯಾರ್ಥಿನಿ ಕು. ಶಾರದಾ ಮಗಜಿ ಸ್ವಾಗತಿಸಿದರು.
ವಿದ್ಯಾರ್ಥಿನಿ ಐಶ್ವರ್ಯ ಕಾರ್ಯಕ್ರಮ ನಿರೂಪಿಸಿರು. ಕೊನೆಯಲ್ಲಿ ಕುಮಾರಿ ಚೇತನಾ ವಂದಿಸಿದರು.
- ಕರುನಾಡ ಕಂದ