ಈ ಹಬ್ಬಗಳು ಈ ವರ್ಷದಿ ಒಂದಾಗಿ
ಒಗ್ಗೂಡಿ ಬಂದು ಹೇಳುತ್ತಿವೆ ನಮಗಾಗಿ
ಭಾವೈಕ್ಯತೆಯ ಬದುಕಿಗೆ ಫಲಪ್ರದವಾಗಿ
ಬದುಕಿರಿ ಜಾತಿ ಎಂಬುದರ ಹೊರತಾಗಿ..!!
ಯುಗಾದಿ-ರಂಜಾನ್ ಹಬ್ಬಗಳ ರೀತಿ
ಹೀಗೆಯೇ ಒಂದಾಗೋಣ ಎಂಬ ನೀತಿ
ಸಾಬೀತು ಮಾಡಿದೆ ನೋಡು ಪ್ರಕೃತಿ
ಸಾಕಿನ್ನು ಜಾತಿಯ ಕುರುಡು ಪ್ರೀತಿ..!!
ಮಾನವೀಯತೆಯ ಪರಿಧಿಯಲ್ಲಿ ಸುತ್ತಾಡಿ
ಭ್ರಾತೃತ್ವ ಬಾವನೆಯ ಬಂಧದಲ್ಲಿ ಒಗ್ಗೂಡಿ
ಹಬ್ಬಗಳು ನೀಡಿದ ಸಂದೇಶವನ್ನು ನೋಡಿ
ಜಾತಿ ಮತ ಪಂಥಗಳನ್ನು ಮಾಡಬೇಡಿ..!!
ಭಾವೈಕ್ಯತೆಗೆ ಧಕ್ಕೆ ಬರದಂತೆ ಹದವರಿತು
ಸೃಷ್ಟಿಯ ಈ ನಿಯಮಗಳನ್ನು ಅರಿತು
ಮೋಸ ದ್ವೇಷ ಅಸೂಯೆಗಳನ್ನು ಮರೆತು
ನಾವೆಲ್ಲರೂ ಕೂಡಿ ಬಾಳೋಣ ಬೆರೆತು..!!

- ಶ್ರೀನಿವಾಸ.ಎನ್.ದೇಸಾಯಿ, ಶಿಕ್ಷಕರು
ಸ ಮಾ ಹಿ ಪ್ರಾ ಶಾಲೆ ವಿದ್ಯಾನಗರ, ಕುಷ್ಟಗಿ.
