ಯುಗಾದಿ ಮತ್ತೆ ಮರಳಿ ಬಂದಿದೆ
ಮರಳಿ ಬಂದಿದೆ ಸೊಬಗ ತಂದಿದೆ
ಭುವಿ ತುಂಬಾ ಚೆಲುವು ತುಂಬಿದೆ
ನಿಸರ್ಗದಿ ಹಸಿರು ಮೂಡಿದೆ.
ಹಸಿರ ಬಸಿರು ನಯನ ಸೆಳೆದಿದೆ
ಮರ ಗಿಡದಲಿ ರಂಗು ಚೆಲ್ಲಿದೆ
ಮರದ ತುಂಬಾ ಹಕ್ಕಿ….
ವಸಂತ ರಾಗ ಉಕ್ಕಿ…..
ಉದಯನುದಯ ಉಲ್ಲಾಸವೂ..
ಮನದ ಮನಸ…
ಮಧುರದೊಸೆಗೆಯು.
ಭರವಸೆಯ ಬೆಳಕು ಮೂಡಿದೆ
ಹೊಸ ಕನಸು ಹೊಸೆಯಬೇಕಿದೆ
ಭೇದ ದೂರ ಮಾಡುವಾ…
ಕ್ರೋಧ ನಾಶಗೊಳಿಸುವಾ…
ಅನ್ಯೋನ್ಯದಿಂದ ಬಾಳುವಾ…
ಮೋದ ಪ್ರಮೋದ ಹೊಂದುವಾ..
ಬೇವು ಬೆಲ್ಲ ಬನ್ನಿ ಸವಿಯುವಾ…
ರಚನೆ: ಜೆಎನ್ ಬಸವರಾಜಪ್ಪ ಸಾಹಿತಿಗಳು ಭದ್ರಾವತಿ, ಮೊ : 8105441418
