೧.
ಮುಖವಾಡದ
ಈ ಜನರ ವೇಷವು,
ಇನ್ನೆಷ್ಟು ದಿನ?!
೨.
ಸಸ್ಯ ಕೋಟಿಯ
ಸಾಲು ಮರದ ಅವ್ವ,
ಜಗದ ಅಕ್ಕ.
೩.
ಆಶ್ವಾಸನೆಯ
ಪ್ರತಿರೂಪವೇ ಇವ,
ರಾಜಕಾರಣಿ!.
೪.
ರವಿ ಕಾಣದ್ದು
ಕಾಣುವನೀತ ಕವಿ,
ಜಗ ವೈಚಿತ್ರ್ಯ!
೫.
ಸತಿ ಸುತರು
ಬಾಳ ಪಯಣಿಗರು,
ಸಂಸಾರ ನೌಕೆ!.
- ಶಿವಪ್ರಸಾದ್ ಹಾದಿಮನಿ.
ಕನ್ನಡ ಉಪನ್ಯಾಸಕರು, ಸ.ಪ್ರ.ದ.ಮಹಿಳಾ ಕಾಲೇಜು,
ಕೊಪ್ಪಳ.583231.
