ನವ ಸಂತ ಮಾಸದಲ್ಲಿ
ಹೂ ಚಿಗುರಿತು ಮರದಲ್ಲಿ
ನಿನ್ನ ನೋಡುತ ನಾನು ಬಂದಲ್ಲಿ
ಆತುರ ಕಾತುರದಿಂದಲ್ಲಿ
ನವ ವಸಂತ ಮಾಸದಲ್ಲಿ
ಮತ್ತೆ ಚಿಗುರಿತು ಹೂ ಮರದಲ್ಲಿ
ಹೆದರಿಗೆ ಬಂದೆ ನಾನು ಅಲ್ಲಿ
ನೀನು ನೋಡಲಿಲ್ಲ ಯಾಕೆ ನನ್ನಲ್ಲಿ
ಹೆದರಿಗೆ ಬಂದರೆ ಮೌನವ ಯಾಕೆ ನೀ ನಲ್ಲಿ
ನಾನು ಹೇಗೆ ಇರಲಿ ಇಲ್ಲಿ
ನವ ವಸಂತ ಮಾಸದಲ್ಲಿ ಮತ್ತೆ ಚಿಗುರಿತು ಹೂ ಮರದಲ್ಲಿ
ಹೂ ಕೇಳೆ ಚಿಗುರು ಕೇಳಿ
ನಮ್ಮಿಬ್ಬರ ಮನಸಲೆ
ನಮ್ಮಿಬ್ಬರ ಕುತೂಹಲಕ್ಕೆ ಹೇಳಿ
ತಂಪು ಗಾಳಿ ಹೇಳಿರಿ ಹೇಳಿ
ನವ ಸಂತ ಮಾಸದಲ್ಲಿ ಮತ್ತೆ ಚಿಗುರಿತು ಹೂ ಮರದಲ್ಲಿ
ನನ್ನ ಬಿಟ್ಟು ನೀ ಇರಲಾರೆ ಹೀಗೆ
ನಾನು ಬಂದಿರುವೆ ನಿನ್ನ ದುನಿಗಾಗಿ
ನಮ್ಮ ಸ್ನೇಹ ಹೀಗೆ ಇರಲಿ ಇಲ್ಲಿ
ಲೋಕದ ಸೃಷ್ಟಿ ನಮ್ಮಿಬ್ಬರಲ್ಲಿ
ನವ ಸಂತ ಮಾಸದಲ್ಲಿ ಮತ್ತೆ ಚಿಗುರಿತು ಹೂ ಮರದಲ್ಲಿ
- ಅಕ್ಕಮಹಾದೇವಿ ಅಂಗಡಿ, ರಾಜೂರು
ಕುಕನೂರು ತಾಲೂಕು, ಕೊಪ್ಪಳ ಜಿಲ್ಲೆ.
