೧.
ಅಯ್ಯಾ ಸ್ವಲ್ಪ ಇತ್ತ ಕಡೆ ನೋಡಯ್ಯ,
ನಾವಿರುವ ಲೋಕವು
ಇದೇ ಏನಯ್ಯ?
ಇದು ಪ್ರಜಾಪ್ರಭುತ್ವದ
ರಾಜ್ಯವೇನಯ್ಯ,!
ಇದು ಅಕ್ರಮಗಳ
ರಾಜ್ಯವಾಗಿದೆ ನೋಡಯ್ಯ!
ಇದು ಹಗರಣಗಳ
ಸರಮಾಲೆಯಯ್ಯ!
ಮುಂದೇನಿದೆಯೋ,
ನಾ ಕಾಣೆನೆಂದ ಶಿವ ಶಿವಾ!.
೨.
ಪಂಪ ಮಹಾಕವಿ ಹೇಳಿದ್ದ
” ಮಾನವ ಕುಲಂ ತಾನೊಂದೇ ವಲಂ ” ಈ ಮಾತೀಗ ಅರ್ಥವ
ಕಳೆದುಕೊಂಡಿದೆ ಅಯ್ಯ,
ಒಂದೊಂದು ಕುಲವೂ
ಸಹಸ್ರಾರು ಕುಲಗಳಾಗಿಹುದಯ್ಯಾ, ಎಂದ ಶಿವ ಶಿವಾ!
೩.
ಕಚ್ಚಾಡುತಿರುವರಿಲ್ಲಿ
ನಾ ಮೇಲು,ನೀ ಕೀಳೆಂದು
ಇವರಿಗೆ ಬುದ್ಧಿ ಬರುವುದೆಂದೋ,?!
ಆ ಧರ್ಮ,ಈ ಧರ್ಮ
ಸ್ವ ಧರ್ಮ ವೆನ್ನುತ್ತಾ,
ಅಧರ್ಮದ ದಾರಿಯಲ್ಲೇ
ಸಾಗುತ್ತಿರುವರಲ್ಲ ಶಿವ ಶಿವಾ!
೪.
ಆತ್ಮ ಯಾವ ಕುಲ,?
ಜೀವ ಯಾವ ಕುಲ?
ಗಾಳಿ ಯಾವ ಕುಲ,?
ಎಂದೆಲ್ಲ ಪ್ರಶ್ನಿಸಿ,ಮಾಡಿದರು
ಅಂದು ಬಸವಾದಿ ಪ್ರಮಥರು
ಸಾಮಾಜಿಕ ಕ್ರಾಂತಿ! ಆದರಿಂದು?, ನೀ ಮೇಲು ಕುಲ
ನೀ ಕೀಳು ಕುಲ ಎಂದೆಲ್ಲ ಹೇಳುತ್ತಾ, ಮಾಡುತಿಹರು
ಸಮಾಜ ವಿಕೃತಿ! ಇವರು
ಆಧುನಿಕರು ನೋಡೆಂದ
ಶಿವ ಶಿವಾ!
- ಶಿವಪ್ರಸಾದ್ ಹಾದಿಮನಿ ✍️.
ಕನ್ನಡ ಉಪನ್ಯಾಸಕರು,
ಕೊಪ್ಪಳ. ೫೮೩೨೩೧.
ಮೊಬೈಲ್ ಸಂಖ್ಯೆ.
೭೯೯೬೭೯೦೧೮೯.
