ಧರ್ಮದ ಹೆಸರಲ್ಲಿ ಹತ್ಯೆಗೈದಿರಿ ಅಂದು
ಪಾಪ ಕರ್ಮಕ್ಕೆ ಬಲಿಯಾದಿರಿ ಇಂದು
ರಕ್ತವ ಹರಿಸಿದಿರಿ ಕ್ರೂರತ್ವದಿ ಮೆರೆದು
ಪ್ರತಿಕಾರ ತಪ್ಪದು ನಿಮಗೆ ಎಂದೆಂದೂ.
ಮೋಸದಿಂದ ನುಗ್ಗಿ ಬಂದ ನರ ರಾಕ್ಷಸರೇ
ಎದೆಯೊಡ್ಡಿ ನಿಲ್ಲದ ಹೀನ ನಾಮರ್ದರೇ
ನಿಸ್ವಾರ್ಥ ಯೋಧರ ಬಲ ಅರಿಯದವರೇ
ನಾರಿಯ ಸಿಂಧೂರ ಅಳಿಸಿದ ಧುರುಳರೇ.
ಬೆನ್ನಟ್ಟಿ ಹಿಡಿದು ಪಾಕಿಸ್ತಾನಿ ಉಗ್ರರ
ಗುಂಡಿಕ್ಕಿ ಹೊಡೆದು ದುಷ್ಟ ಸೈತಾನರ
ಶಕ್ತಿ ಪ್ರದರ್ಶನದಿ ಸಾರುತಲಿ ಸಮರ
ಕೆಣಕಿದವರಿಗೆ ನೀಡೋಣ ಸರಿ ಉತ್ತರ.
ಇಟ್ಟ ಹೆಜ್ಜೆ ಹಿಂದಿಡದ ನಮ್ಮ ಸೈನಿಕರು
ವೈರಿ ಎದೆ ಸೀಳಿ ಬಗೆಯುವ ಧೀರರು
ಪಾಪಿಗಳ ಹುಟ್ಟುಹಡಗಿಸುವ ಶೂರರು
ಧರ್ಮಕ್ಕೆ ತಲೆಬಾಗುವ ಭಾರತೀಯರು.
- ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
(ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು)
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.
ದೂರವಾಣಿ ಸಂಖ್ಯೆ: 9740199896.
