ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಜಗತ್ತಿನಲ್ಲಿ ಅತೀ ಹೆಚ್ಚು ಔಷಧಿ ಉತ್ಪಾದನೆ ಮಾಡುವ ದೇಶ ಭಾರತ

ನಮ್ಮ ದೇಶವು ಜಗತ್ತಿನಲ್ಲಿ ಅತೀ ಹೆಚ್ಚು ಔಷಧಿ ಉತ್ಪಾದನೆ ಮಾಡುತ್ತಿದೆ. ಇಂದು ನಮ್ಮ ದೇಶ ಆರ್ಥಿಕವಾಗಿ ಪ್ರಬಲವಾಗಿ ಆಗುತ್ತಿದೆ ಎಂದು ಮರಿಯಮ್ಮನಹಳ್ಳಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಸುರೇಶ್ ಕುಮಾರ ಅವರು ತಿಳಿಸಿದರು.

ಕೊಪ್ಪಳ :ತಾಲ್ಲೂಕಿನ ಲೇಬಗೇರಿ ಗ್ರಾಮದಲ್ಲಿ ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್. ಎಸ್. ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರದಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ಭಾರತ ಎಂಬ ವಿಷಯ ಕುರಿತು ಅವರು ಮಾತನಾಡಿದರು.
ಜಗತ್ತಿನಲ್ಲಿಯೇ ಅತೀ ಹೆಚ್ಚು ಬಂಗಾರ, ರೇಷ್ಮೆ ನಮ್ಮ ದೇಶದಲ್ಲಿ ಸಿಗುತ್ತದೆ. ನಮ್ಮ ದೇಶ ಕೃಷಿ ಪ್ರಧಾನ ದೇಶ, ದೇಶ ಅಭಿವೃದ್ಧಿ ಆಗಬೇಕಾದರೆ ಕೃಷಿ, ಉತ್ಪಾದನೆ ವಲಯ ಮತ್ತು ಕೈಗಾರಿಕಾ ವಲಯ ಹೆಚ್ಚಾಗಬೇಕು. ತಂತ್ರಜ್ಞಾನ, ರಸ್ತೆ ಮತ್ತು ಅಕ್ಷರತೆ ಜಾಸ್ತಿ ಅಭಿವೃದ್ಧಿ ಆಗಿದೆ. ಈಗ ನಮ್ಮ ದೇಶ ಜಗತ್ತಿನಲ್ಲಿಯೇ 5ನೇ ಶ್ರೀ ಮಂತ ರಾಷ್ಟ್ರವಾಗಿದೆ. ಭಾರತದ ಸಂಪತ್ತು 600 ಬಿಲಿಯನ್ ಡಾಲರ್ ಇದೆ. ಇಂದು ಜನರ ತಲಾ ಆದಾಯ ಹೆಚ್ಚಾಗಿದೆ. ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ದೇಶದಲ್ಲಿ ಆಹಾರ ಅಭಾವ ಇತ್ತು. ಆದರೆ ಈಗ ಆಹಾರ ಧಾನ್ಯಗಳ, ಹಾಲು, ದ್ರಾಕ್ಷಿ, ಮಾವು ಮತ್ತು ಸೇಬುಗಳ ಉತ್ಪಾದನೆಯಲ್ಲಿ ಭಾರತ ಮೊದಲು ಸ್ಥಾನದಲ್ಲಿದೆ. ಇವುಗಳನ್ನು ನಮ್ಮ ದೇಶ ವಿದೇಶಗಳಿಗೆ ರಫ್ತು ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ಶ್ರೀ ಕಲ್ಲಯ್ಯ ಪೂಜಾರ್ ಅವರು ಮಾತನಾಡುತ್ತಾ ಪ್ರತಿಯೊಬ್ಬರಲ್ಲಿ ಪ್ರತಿಭೆ ಇರುತ್ತದೆ. ಅದನ್ನು ಹೊರಗಡೆ ತರಬೇಕು. ಜೀವನದಲ್ಲಿ ಕಷ್ಟ ಪಟ್ಟವರಿಗೆ ಸುಖ ಸಿಗುತ್ತದೆ. ಉದ್ಯೋಗದ ವಿವಿಧ ಕೌಶಲ್ಯಗಳನ್ನು ಕಲಿಯಿರಿ.ಅವಕಾಶಗಳನ್ನು ಉಪಯೋಗ ಮಾಡಿಕೊಳ್ಳಬೇಕು ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಶ್ರೀ ವಿಟೋಬ ಬ. ಎಸ್ ಅವರು ಮಾತನಾಡುತ್ತಾ ಪ್ರತಿಯೊಬ್ಬರಲ್ಲಿ ಇಚ್ಚ ಶಕ್ತಿ ಇರಬೇಕು. ಆಗ ಮಾತ್ರ ನಮ್ಮ ಜೀವನಕ್ಕೆ ಉತ್ತಮ. ನೀವು ಪಠ್ಯತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಪ್ರಮುಖವಾದದ್ದು. ಬುದ್ಧನ ತತ್ವ ಗಳಾದ ಎಲ್ಲರಲ್ಲಿ ಪ್ರೀತಿ, ಕರುಣೆ, ಶಾಂತಿ, ದಾಯೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಭಾರತ ಅಭಿವೃದ್ಧಿ ಆಗಬೇಕಾದರೆ ಗ್ರಾಮಗಳು ಅಭಿವೃದ್ಧಿ ಆಗಬೇಕು ಎಂದು ಗಾಂಧೀಜಿ ಅವರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ನಾವು ಗ್ರಾಮಗಳ ಸ್ವಚ್ಛತೆ ಮತ್ತು ಅಭಿವೃದ್ಧಿ ಮಾಡಬೇಕು. ನಾವೆಲ್ಲರೂ ಗ್ರಾಮೀಣ ಪ್ರದೇಶದ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬೇಕು ಎಲ್ಲರೂ ಸ್ವತಂತ್ರ ಮತ್ತು ಸ್ವಾಭಿಮಾನ ದಿಂದ ಬದುಕವದನ್ನು ಕಲಿಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎನ್. ಎಸ್. ಎಸ್. ಘಟಕದ ಸಂಚಾಲಕ ಡಾ. ನರಸಿಂಹ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಂಗೀತಾ ಮುತ್ತಾಳ ನಿರೂಪಿಸಿದರು. ಸಂಚಿಹೊನ್ನಮ್ಮ ಮತ್ತು ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಸುನಿತಾ ಸ್ವಾಗತಿಸಿದರು. ದುರಗಮ್ಮ ವಂದಿಸಿದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ