ಕೊಪ್ಪಳ: ಸ್ವಚ್ಛತೆ ಇದ್ದ ಕಡೆ ಉತ್ತಮ ಅರೋಗ್ಯ ಇರುತ್ತದೆ ಎಂದು ಕೊಪ್ಪಳದ ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿಗಳಾದ ಶ್ರೀ ಮತಿ ಗಂಗಮ್ಮ ಕಳಸಪುರ ಅವರು ಹೇಳಿದರು.
ತಾಲ್ಲೂಕಿನ ಲೇಬಗೇರೆ ಗ್ರಾಮದಲ್ಲಿ ಬುಧವಾರ ದಂದು ಹಮ್ಮಿಕೊಂಡಿದ್ದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್. ಎಸ್. ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಹಿಳೆಯರ ಅರೋಗ್ಯ ಸಮಸ್ಯೆ ಗಳು ಕುರಿತು ಅವರು ಮಾತನಾಡಿ ದೈಹಿಕವಾಗಿ, ಸಾಮಾಜಿಕವಾಗಿ ಸದೃಢವಾಗಿದ್ದರೆ ಮಾತ್ರ ಅರೋಗ್ಯವಂತ ಅಂತ ನಾವು ತಿಳಿದುಕೊಳ್ಳಬೇಕು, ನಾವು ಅರೋಗ್ಯವಾಗಿದ್ರೆ ನಮ್ಮ ಕುಟುಂಬ ಅರೋಗ್ಯವಾಗಿರುತ್ತವೆ. ಮೊದಲು ಹೆಣ್ಣು ಮಕ್ಕಳು ಶಿಕ್ಷಣ ಪಡೆಯಬೇಕು. ಸ್ವಚ್ಛತೆ ಕುರಿತು ಗ್ರಾಮೀಣ ಪ್ರದೇಶದ ಜನರಿಗೆ ಅರಿವು ಮೂಡಿಸಬೇಕು. ಅರೋಗ್ಯವಾದ ಸಮಾಜ ಇದ್ದರೆ ಅರೋಗ್ಯವಂತ ಜನರು ಇರುತ್ತಾರೆ. ಆರೋಗ್ಯವಂತ ಜನರಿದ್ದರೆ ದೇಶ ಆರ್ಥಿಕವಾಗಿ ಸುಧಾರಣೆ ಆಗುತ್ತದೆ. ನಮ್ಮಲ್ಲಿ ಶಿಸ್ತು ಇರಬೇಕು.ಕೆಲಸ ಒತ್ತಡದಿಂದ ಮಾನಸಿಕವಾಗಿ ನರಳಬಾರದು. ಸಚ್ಛತೆ ಇಲ್ಲದಿದ್ದರೆ ಸಾಂಕ್ರಾಮಿಕ ರೋಗಗಳು ಬರುತ್ತವೆ. ಬಾಲ್ಯ ವಿವಾಹಗಳನ್ನು ಮಾಡಬಾರದು. ಮಹಿಳೆಯರು ಗರ್ಭಿಣಿ ಆಗಿದ್ದಾಗ ಅರೋಗ್ಯವನ್ನು ಕಾಪಾಡಿಕೊಳ್ಳಬೇಕು.ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು.
ಕೊಪ್ಪಳದ ಅರೋಗ್ಯ ಇಲಾಖೆಯ ಹಿರಿಯ ಅರೋಗ್ಯ ಅಧಿಕಾರಿಗಳಾದ ಶ್ರೀ ಮತಿ ಶೈಲಜಾ ಪಾಟೀಲ್ ಮಾತನಾಡುತ್ತಾ ನಾವು ಪೌಷ್ಟಿಕ ಆಹಾರವನ್ನು ಸೇವಿಸಬೇಕು. ತರಕಾರಿ, ಸೊಪ್ಪುಗಳನ್ನು ತಿನ್ನಬೇಕು. ಹಾಲು, ತತ್ತಿ ಸೇವಿಸಿದರೆ ರಕ್ತ ಹೀನತೆ ಕಡಿಮೆ ಆಗುತ್ತದೆ ತಿಳಿಸಿದರು.
ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಶುಭ ಅವರು ಮಾತನಾಡುತ್ತ ಎನ್. ಎಸ್. ಎಸ್ ಶಿಬಿರಗಳಿಂದ ನಮಗೆ ಜನರ ಸಮಸ್ಯೆಗಳು, ಸಮುದಾಯ ಪರಿಸ್ಥಿತಿಗಳು, ಗ್ರಾಮೀಣ ಪ್ರದೇಶದ ಸಮಸ್ಯೆಗಳು ಅರ್ಥವಾಗುತ್ತವೆ. ನಿಮ್ಮಲ್ಲಿರುವ ಸಮಸ್ಯೆಗಳನ್ನು ಪಾಲಕರ ಹತ್ತಿರ ಹೇಳಿಕೊಳ್ಳಬೇಕು. ಸರಕಾರಿ ಆಸ್ಪತ್ರೆಯ ಅರೋಗ್ಯ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಬೇಕು ಎಂದರು. ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ ಹುಲಿಗೆಮ್ಮ ಅವರು ಮಾತನಾಡುತ್ತ ನಮ್ಮ ಅರೋಗ್ಯ ನಮ್ಮ ಕೈಯಲ್ಲಿ ಇಟ್ಟುಕೊಳ್ಳಬೇಕು. ಕೆಲಸದಲ್ಲಿ ತಲ್ಲಿನರಾಗಿ ಅರೋಗ್ಯ ಕುರಿತು ನಿರ್ಲಕ್ಷ್ಯ ಮಾಡಬಾರದು. ನಮ್ಮ ಅರೋಗ್ಯ ಚೆನ್ನಾಗಿ ಇದ್ದರೇ ನಮ್ಮ ಪರಿಸರ ಸಹ ಚನ್ನಾಗಿ ಇರುತ್ತದೆ. ಹೆಣ್ಣುಮಕ್ಕಳು ಗಟ್ಟಿಯಾಗಿದ್ದರೆ ನಮ್ಮ ಕುಟುಂಬ ಆರೋಗ್ಯವಾಗಿರುತ್ತದೆ. ನಮಗೆ ನಾವು ಅರಿವು ಮೂಡಿಸಕೊಳ್ಳಬೇಕು. ನೀವು ಪಾಠದ ಜೊತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕು ಎಂದು ಅಭಿಪ್ರಾಯ ಪಟ್ಟರು.
ರಾಣಿ ಅಬ್ಬಕ್ಕೆ ದೇವಿ ತಂಡ ಪ್ರಾರ್ಥನೆ ಗೀತೆ ಹಾಡಿದರು. ಯಲ್ಲಮ್ಮ ನಿರೂಪಿಸಿದರು. ಶ್ರೀದೇವಿ ಸ್ವಾಗತಿಸಿದರು. ಶಾಶ್ವತ ವಂದಿಸಿದರು.
- ಕರುನಾಡ ಕಂದ
