ನಮ್ಮ ರೈತನಿಗೆ ಹೆಣ್ಣು ಕೊಡಿ,
ದುಡಿಯುವ ಕೈಗೆ ಹೆಗಲು ಕೊಡಿ,
ಅನ್ನದಾತನನ್ನ ಮರೆಯಬೇಡಿ,
ಬಾಳು ಬೆಳಗಲು ಅವಕಾಶ ಕೊಡಿ,
ಅಂಜದಿರಿ ಅಳುಕದಿರಿ
ಹೆಚ್ಚು ಯೋಚಿಸದಿರಿ,
ಸಿಟಿಯವರಿಗಿಂತ ಹೆಚ್ಚು ಗಳಿಸ್ತಾರ್ರಿ,
ಸಿಟಿ ಸೌಲಭ್ಯ ಅಲ್ಲೂ ಐತೆರಿ,
ಶುದ್ಧ ಹಸಿರು ಉಸಿರು ಸಿಗುತೈತೆರಿ.
ಪಂಚೆ ಟವಲ್ ಹಾಕಿದಾಕ್ಷಣ ಸೌಂದರ್ಯ ಇಲ್ಲಾಂತಲ್ಲ, ಅಂತರಂಗದ ಸೌಂದರ್ಯಕ್ಕೇನು ಕಮ್ಮಿಯಿಲ್ಲ,
ಹಳ್ಳಿಗೆ ಹೆಣ್ಣು ಕೊಡೋಲ್ಲ ಅಂತಾರಲ್ಲ,
ಹಳ್ಳಿಯ ಸೊಬಗು ನೋಡಿ ಬನ್ನಿ ಎಲ್ಲ.
ಹಳ್ಳಿಯ ವಾತಾವರಣ ಬದಲಾಗಿದೆ ನೋಡಿ,
ಹೊಸತನದ ಹುರುಪು ಬೆಳೆಸಿದೆ ಎಲ್ಲರೂ ಕೂಡಿ,
ಜಮೀನೆಲ್ಲಾ ತೋಟ – ಫಾರಂ ಹೌಸ್ ಮಾಡಿ,
ಸಿಟಿ ಸೇರಿದವರಲ್ಲ ವಾಪಸು ಬರುತ್ತಿದ್ದಾರೆ ಓಡಿ.
✍️ ಎಮ್.ಎಚ್.ಹುಡೇದ
