ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ ಎಪಿಎಂಸಿ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಇಂದಿರಾ ಕ್ಯಾಂಟೀನ್ ಇದೆ ಮೇ 27 ರಂದು ಪ್ರಾರಂಭೋತ್ಸವ ನೆರವೇರಿಸಲಾಗುತ್ತದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ರವೀಂದ್ರ ಬಾಗಲಕೋಟೆ ತಿಳಿಸಿದರು.
ಕುಕನೂರು ಪಟ್ಟಣದ ನಿರೀಕ್ಷಣ ಮಂದರದಲ್ಲಿ ಶನಿವಾರ ದಿನದಂದು ಕರೆದಿದ್ದ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಕರ್ನಾಟಕ ಸರ್ಕಾರದ ಕನಸಿನ ಕೂಸಾಗಿರುವ ಇಂದಿರಾ ಕ್ಯಾಂಟೀನ್ ಮೇ 27 ರಂದು ಪ್ರಾರಂಭೋತ್ಸವ ಹಮ್ಮಿಕೊಳ್ಳಲಾಗಿದೆ ಅತ್ಯಂತ ಕಡಿಮೆ ದರದಲ್ಲಿ ಕುಕನೂರು ಹಾಗೂ ಸುತ್ತಲಿನ ಜನರ ಬಹುದಿನಗಳ ಬೇಡಿಕೆ ಯಾದ ಇಂದಿರಾ ಕ್ಯಾಂಟಿನ್. ಕುಕುನೂರು ಗ್ರಾಮದ ಗ್ರಾಮಸ್ಥರಿಗೆ ಕೂಲಿ ಕಾರ್ಮಿಕರಿಗೆ, ಹಮಾಲರಿಗೆ, ವ್ಯಾಪಾರಸ್ಥರಿಗೆ ಹಸಿದವರ ಪಾಲಿನ ಕಾಮಧೇನು ಇದ್ದಂತೆ, ಅತಿ ಕಡಿಮೆ ದರದಲ್ಲಿ ಊಟ ಲಭ್ಯವಾಗುತ್ತಿದ್ದು ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕು, ಇಂದಿರಾ ಕ್ಯಾಂಟೀನ್ ಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಚಾಲನೆ ನೀಡುವರು, ಶಾಸಕ ಬಸವರಾಜ ರಾಯರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಕ್ಯಾಂಟಿನ್ ನಿರ್ವಹಣೆ ಇರುತ್ತದೆ ರಾಯಚೂರಿನ ವೀರಯ್ಯ ಹಿರೇಮಠ ಅವರು ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರು ಆಗಿದ್ದು ಸಾರ್ವಜನಿಕರು ಇದನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಪಟ್ಟಣ ಪಂಚಾಯತ್ ಅಧ್ಯಕ್ಷೆ ಲಲಿತಮ್ಮ ಯಡಿಯಾಪುರ, ಉಪಾಧ್ಯಕ್ಷ ಪರಶುರಾಮ್ ಆರಬೆರಳನ್ , ಸ್ಥಾಯಿ ಸಮಿತಿ ಅಧ್ಯಕ್ಷ ನೂರ ಅಹ್ಮದ್ ಗುಡಿ ಹಿಂದಲ್, ಸದಸ್ಯರಾದ ರಾಮಣ್ಣ ಬಂಕದಮನಿ, ಯಲ್ಲಪ್ಪ ಕಲ್ಮನಿ, ವೀರಣ್ಣ ಯಲಬುರ್ಗಾ ಸೇರಿದಂತೆ ಇತರರು ಹಾಜರಿದ್ದರು.
- ಕರುನಾಡ ಕಂದ
