ಕೊಪ್ಪಳ/ಕುಕನೂರು :ಆಶ್ರಯ ನಿವೇಶನ ಹಂಚಿಕೆಯಲ್ಲಿ ಹನುಮಂತ ಗೌಡ ಚಂಡೂರು ಹಾಗೂ ಪಿಡಿಓ, ಅಧ್ಯಕ್ಷರ ಯಾವುದೇ ದುಡ್ಡಿನ ಆರೋಪದಲ್ಲಿ ಹುರುಳಿಲ್ಲ ಅಧ್ಯಕ್ಷೆ ಹಣ ಪಡೆದು ನಿವೇಶನ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಕ್ಕೆ ಸಾಕ್ಷಿ ಪುರಾವೆ ಒದಗಿಸಿ ಮಾತನಾಡಬೇಕು ಎಂದು ಚಂಡೂರು ಗ್ರಾಮದ ಗ್ರಾಮಸ್ಥ ಈರಪ್ಪ ಹಿರೇಮನಿ ಹೇಳಿದರು.
ಅವರು ರವಿವಾರದಂದು ಕುಕುನೂರು ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಿನ್ನೆ (ಶನಿವಾರ) ದಂದು ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಚೆಂಡೂರು ಗ್ರಾಮದ ಕೆಲವೊಂದಿಷ್ಟು ಜನ ಆರೋಪ ಮಾಡಿದ್ದು ಒಂದು ಕುಟುಂಬಕ್ಕೆ ಎರಡೆರಡು ನಿವೇಶನ ಕೇಳುತಿದ್ದು, ಹಾಗೆ ಕೊಡಲು ಬರುವುದಿಲ್ಲ ಎಂದು ಹೇಳಿದ್ದಕ್ಕೆ ತಮಗೆ ತಿಳಿದಂತೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಅಧ್ಯಕ್ಷರು, ಪಿಡಿಒ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಕೋಟಾ ಪ್ರಕಾರ ಪ್ರತಿಯೊಬ್ಬರಿಗೂ ನಿವೇಶನ ಹಂಚಿಕೆ ಮಾಡಿದ್ದಾರೆ.
ಪರಿಶಿಷ್ಟ ಜಾತಿ, ಪಂಗಡ, ವಿಕಲಚೇತನರಿಗೆ, ಮಹಿಳೆಯರಿಗೆ, ನಿವೇಶನ ರಹಿತರಿಗೆ ಇತರರಿಗೆ ಸಮರ್ಪಕವಾಗಿ ಹಂಚಿಕೆ ಮಾಡಲಾಗಿದೆ.
ಶಿರೂರು ಗ್ರಾಮ ಪಂಚಾಯತಿಯಲ್ಲಿ ಯಾವುದೇ ಗ್ರಾಮ ಸಭೆ ಇದ್ದರೂ ಪ್ರತಿ ಗ್ರಾಮ ಸಭೆಯನ್ನು ಎರಡು, ಮೂರು ವರ್ಷದಿಂದ ಅಲ್ಲಿಯೇ ಮಾಡುತ್ತಾ ಬಂದಿದ್ದೇವೆ. ಇಷ್ಟು ವರ್ಷ ಎಲ್ಲಾ ಗ್ರಾಮ ಸಭೆಗಳು ಅಲ್ಲಿಯೇ ನಡೆದರೂ ಸುಮ್ಮನಿದ್ದರು, ಈಗ ತಾವು ಹೇಳಿದಂತೆ ಒಂದೇ ಕುಟುಂಬದವರಿಗೆ ಎರಡು ಮೂರು ನಿವೇಶನ ನೀಡದಿದ್ದಕ್ಕೆ ಕ್ಯಾತೆ ತೆಗೆದು ಮುಖಂಡರ ಹಾಗೂ ಪಿಡಿಒ, ಅಧ್ಯಕ್ಷರ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿ ಅವರ ಹೆಸರಿಗೆ ಕಪ್ಪು ಮಸಿ ಬಳಿಯಲು ಯತ್ನಿಸಿದ್ದಾರೆ ನಿವೇಶನಗಳನ್ನು ಗ್ರಾಮ ಸಭೆ ಹಾಗೂ ಕಾನೂನಿನ ಚೌಕಟ್ಟಿನಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು ,ಯಾವುದೇ ಲೋಪ ದೋಷಗಳು ಇರುವುದಿಲ್ಲ ನಿನ್ನೆ ಹೇಳಿರುವ ಹೇಳಿಕೆಗಳೆಲ್ಲಾ ಸುಳ್ಳು ಎಂದು ಹೇಳಿದರು.
ನಿನ್ನೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ದ್ಯಾಮವ್ವ ಹಂದ್ರಾಳ ಎಂಬ ಮಹಿಳೆ ನಿವೇಶನಕ್ಕಾಗಿ 20 ಸಾವಿರ ಹಣವನ್ನು ನೀಡಿರುವುದಾಗಿ ಹೇಳಿಕೆ ನೀಡಿದ್ದು ಶುದ್ಧ ಸುಳ್ಳು ಎಂದು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ದ್ಯಾಮವ್ವ ಹಂದ್ರಾಳ ಮಗಳಾದ ಯಲ್ಲಮ್ಮ ಹಂದ್ರಾಳ ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಮ್ಮ ಸಣ್ಣ ಹನುಮಪ್ಪ ಜ್ಯೋತಿ, ಶಂಕ್ರಪ್ಪ ಕುರಿ ಗ್ರಾಮ ಪಂಚಾಯತ್ ಸದಸ್ಯರು, ಈರಪ್ಪ ಡಿ ಹಿರೇಮನಿ, ದೇವಪ್ಪ ಕುರಿ, ಗುಡದಪ್ಪ ನಿಂಗಾಪೂರ, ಲಕ್ಷ್ಮಣ ತಳವಾರ, ಶಶಿಕಲಾ ಸಂಖಿನ, ಶಾರವ್ವ ಬಳಗೇರಿ, ಹನುಮವ್ವ ತಳಕಲ, ಅನಸಮ್ಮ ತಳಬಾಳ, ಯಲ್ಲಮ್ಮ ಹಂದ್ರಾಳ, ಈರಪ್ಪ ನಿಂಗಾಪುರ, ಹನುಮಪ್ಪ ಜ್ಯೋತಿ, ದೇವಪ್ಪ ಇತರರು ಇದ್ದರು,
- ಕರುನಾಡ ಕಂದ
