62ನೇ ವಯಸ್ಸಿನಲ್ಲಿ ಶಾಂತಾರಾಮ್ ರಾವ್ ತಮ್ಮ ಮನೆಯ ಮುಂಭಾಗದ ಬಾಲ್ಕನಿಯಲ್ಲಿ ಕುಳಿತು, ಮೊಬೈಲ್‌ನಲ್ಲಿ ರಾಜಕೀಯ ವಿಡಿಯೋಗಳನ್ನು ವೀಕ್ಷಿಸುತ್ತಿದ್ದರು.
ಒಂದು ಕಾಲದಲ್ಲಿ ಅವರು ಗೌರವಾನ್ವಿತ ಸರ್ಕಾರಿ ಅಧಿಕಾರಿಯಾಗಿದ್ದವರು. ಆದರೆ ಈಗ ಅವರ ದಿನಚರಿ ಚಿಕ್ಕದಾಗಿ ಬಿಟ್ಟಿತ್ತು. ಎದ್ದು ಚಹಾ ಕುಡಿಯುವುದು, ಮೆಸೇಜ್ ಫಾರ್ವರ್ಡ್ ಮಾಡುವುದು, ಕೂಗು-ಹರಟೆ(ವಿಷೇಶವಾಗಿ TV ಚಾನಲ್ ಗ ಪ್ಯಾನಲ್ ಡಿಸ್ಕಶನ್) ಹೇಳುವುದು, ಮಲಗುವುದು… ಹೀಗೆ ಮತ್ತೆ ಮತ್ತೆ.
ಅವರ ಪತ್ನಿ ಸುಲೋಚನಮ್ಮ 59, ಧಾರಾವಾಹಿ, ದೇವಸ್ಥಾನ ಮತ್ತು ಆರೋಗ್ಯ ಬಗ್ಗೆ ವಿಡಿಯೋ ಫಾರ್ವರ್ಡ್ ಮಾಡುವುದರಲ್ಲಿ ನಿರತ. ಅಕ್ಕ ಹೇಳಿದ ವಿಷಯವನ್ನು ತಂಗಿಗೆ, ಚಿಕ್ಕಮ್ಮ ಹೇಳಿದ ವಿಷಯವನ್ನು ಅಮೆರಿಕದಲ್ಲಿ ಇರುವ ಮಗನಿಗೆ ಹೀಗೆ!!
ಮಕ್ಕಳು ದೂರದಲ್ಲಿದ್ದರು ಒಬ್ಬರು ಅಮೆರಿಕದಲ್ಲಿ, ಮತ್ತೊಬ್ಬರು ಸಿಂಗಾಪುರದಲ್ಲಿ. ಅವರು ಆಗಾಗ್ಗೆ ಕರೆಮಾಡಿ ಹೇಳುತ್ತಿದ್ದರು:
“ಅಮ್ಮ-ಅಪ್ಪ, ಸ್ವಲ್ಪ ಹೊಸದು ಪ್ರಾರಂಭಿಸಿ. ಟ್ರಾವೆಲ್ ಮಾಡಿ. ಲೈಫ್ ಎಂಜಾಯ್ ಮಾಡಿ.”
ಆದರೆ ಇವೆರಡೂ ಶೂನ್ಯವಾಗಿ ತೋಚುತ್ತಿತ್ತು.
ಒಂದು ಪತ್ರ, ಬದುಕು ಬದಲಿಸಿದ ಕ್ಷಣ
ಅವರು ಊಹಿಸದಂತಹ ಒಂದು ದಿನ, ಅವರ ಮೊಮ್ಮಗ ಆರವ್ (13 ವರ್ಷದ) ಅಮೆರಿಕದಿಂದ ಒಂದು ಕೈ ಬರಹದ ಪತ್ರ ಕಳಿಸಿದ್ದ:
ಅಜ್ಜ–ಅಜ್ಜಿ,
ನೀವು ನನಗೆ ಯಾವಾಗಲೂ ಹೇಳ್ತೀರಾ, ಕಲಿಯಬೇಕು, ಒಳ್ಳೆಯದು ಮಾಡಬೇಕು, ಯಾರಿಗಾದರೂ ಸಹಾಯ ಮಾಡಬೇಕು ಅಂತ. ಆದರೆ ನೀವು ಯಾಕೆ ನಿಲ್ಲಿಸಿದ್ದೀರಿ?
ನಿಮ್ಮಿಂದ ನಾನು ತುಂಬಾ ಕಲಿತೆ. ಈಗ ನಿಮ್ಮ ಕಾಲ ಬಂದಿದೆ ಮತ್ತೆ ಫ್ರೆಶ್ ಆಗಿ ಏನಾದರೂ ಹೊಸದು ಮಾಡೋಕೆ. ಪ್ಲೀಸ್, ದಿನವೆಲ್ಲಾ ಫೋನ್ ನಲ್ಲಿ ಮಾತಾಡ್ತಿರೊದನ್ನ ಬಿಡಿ. ಹೊಸದು ಕಲಿಯಿರಿ. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ, ಟ್ರಾವೆಲ್ ಮಾಡಿ. ಬದುಕಿ!”
ಆ ಸಾಲುಗಳು ಎದೆಯೊಳಗೆ ತೀವ್ರವಾಗಿ ಬಡಿದವು. ಶಾಂತಾರಾಮ್ ಆ ಪತ್ರವನ್ನು ನಿಧಾನವಾಗಿ ಜೇಬಿಗಿಳಿಸಿ, ಆ ರಾತ್ರಿ ಅವರು ಮೊಬೈಲ್ ತೆಗೆದಿಲ್ಲ. ಬದಲಾಗಿ, ತಾರೆಗಳನ್ನು ನೋಡುತ್ತಾ ತಮ್ಮ ಹೆಂಡತಿಗೆ ಕೇಳಿದರು “ಆರವ್ ಪತ್ರದ ಬಗ್ಗೆ ಏನು ಅನ್ನಿಸ್ತಿದೆ?.
“ನಾವು ಯಾಕೆ ನಮ್ಮ ಸೆಕೆಂಡ್ ಇನಿಂಗ್ಸ್ ಶುರು ಮಾಡಬಾರದು?”
🌿ಹೊಸ ಪ್ರಾರಂಭ.🌿
ಮರುದಿನ ಬೆಳಿಗ್ಗೆ ಎಂದಿನಂತಿರಲಿಲ್ಲ, ಏನೋ ಹೊಸದನ್ನು ಮಾಡುವ ಚಟಪಟಿಕೆ ಇಬ್ಬರಲ್ಲೂ ಇತ್ತು, ನಿನ್ನೆ ಮಾಡಿತ್ತಿದ್ದ ಕೆಲಸಗಳೆಲ್ಲ ಇಂದು ಮಾಡಲು ಮನಸ್ಸಾಗಲಿಲ್ಲ.
ಸುಲೋಚನಮ್ಮ ಯೂಟ್ಯೂಬ್‌ನಲ್ಲಿ ಮಿಲೆಟ್ ಕುಕೀಸ್ ಬೇಕಿಂಗ್ ತರಗತಿಗಳನ್ನು ನೋಡುತ್ತಾ ಹೊಸದಾಗಿ ಕಲಿಯಲು ಶುರು ಮಾಡಿದರು.
ಶಾಂತಾರಾಮ್, ಸ್ಥಳೀಯ ನೈಸರ್ಗಿಕ ಸಂಚಾರಿ ಕ್ಲಬ್ ಸೇರಿದರು. ವಾರಾಂತ್ಯದಲ್ಲಿ ಪ್ಲಾಂಟೇಶನ್, ಹೆರಿಟೇಜ್ ವಾಕ್ ಮಾಡುತ್ತಿದ್ದವರ ತಂಡದೊಂದಿಗೆ ಸೇರಿಕೊಂಡರು.
ಅವರ ಸುತ್ತಲೂ ಎಲ್ಲಾ ವಯಸ್ಸಿನ ಜನರನ್ನು ನೋಡಿದರು ಚರ್ಚೆ, ಸಂಭಾಷಣೆ, ನಗು ಹೊಸ ತಲೆಮಾರಿನ ಯೊಚನೆಯ ಲಹರಿಯನ್ನ ಗಮನಿಸಲು ಪ್ರಾರಂಭಿಸಿದರು.
ಸುಲೋಚನಮ್ಮ “ಅಜ್ಜಿ’ಸ್ ಟ್ರೀಟ್ಸ್” ಎಂಬ ಹೆಸರಿನಲ್ಲಿ ಆರೋಗ್ಯಕರ ಕುಕೀಗಳನ್ನು ತಯಾರಿಸಿ, ಲಾಭದ ಒಂದು ಭಾಗವನ್ನು ಅನಾಥಾಶ್ರಮಕ್ಕೆ ದಾನ ಮಾಡತೊಡಗಿದರು.
ಶಾಂತಾರಾಮ್, ಸ್ಥಳೀಯ ಸರ್ಕಾರಿ ಶಾಲೆಯ ಮಕ್ಕಳಿಗೆ ಇಂಗ್ಲಿಷ್ ಮತ್ತು ಪಬ್ಲಿಕ್ ಸ್ಪೀಕಿಂಗ್ ಕಲಿಸತೊಡಗಿದರು.
🌿ಹಳೆಯ ಆಸೆಗಳ ಪುನರಜ್ಜೀವನ🌿
ಶಾಂತಾರಾಮ್ ಅವರು ತನ್ನ ಸೇವಾ ದಿನಗಳ ನೆನಪಿನಲ್ಲಿ ಒಂದು ಪುಸ್ತಕ ಬರೆಯಬೇಕೆಂಬ ಕನಸು ಇಟ್ಟುಕೊಂಡಿದ್ದರು. ಈಗ ಅವರು ಅದನ್ನು ಮುಗಿಸಿದರು. ಸ್ವಯಂ ಪ್ರಕಟಿಸಿದ ಆ ಪುಸ್ತಕ ಇತರ ವೃತ್ತ ವಲಯದ ಅಧಿಕಾರಿಗಳಲ್ಲಿ ಜನಪ್ರಿಯವಾಯಿತು.
ಸುಲೋಚನಮ್ಮ ಮಹಿಳಾ ಸಮೂಹಗಳಿಗೆ ಆರೋಗ್ಯಕರ ಪಾಕವಿಧಾನ ತರಗತಿಗಳನ್ನು ನೀಡಲು ಆಹ್ವಾನ ಪಡೆದರು.
ಅವರು ಇಬ್ಬರೂ ಸೇರಿ ಹೊಸದಾಗಿ ಮೊಮ್ಮಗನ ಸಹಾಯದಿಂದ — ಫೋಟೋಗ್ರಫಿ, ಯೂಟ್ಯೂಬ್ ವಿಡಿಯೋ ಎಡಿಟಿಂಗ್, ಸಿಂಪಲ್ ಆನ್‌ಲೈನ್ ಮಾರ್ಕೆಟಿಂಗ್. ತಂತ್ರಜ್ಞಾನವನ್ನು ಗೆದ್ದುಕೊಂಡರು.
ಅವರು ಹಿರಿಯರೊಂದಿಗೆ ಮೊದಲ ಬಾರಿಗೆ ಥೈಲ್ಯಾಂಡ್ ಭೇಟಿ ಮಾಡಿದರು — ಕಡಲತೀರದಲ್ಲಿ ನೃತ್ಯ ಮಾಡಿದರು, ಹೊಸ ಆಹಾರಗಳನ್ನು ಸವಿದರು, ಅದು “ಬದುಕಿನ ಎರಡನೇ ಹನಿಮೂನ್” ಆಯಿತು.
ಹೀಗೆಯೇ, ದಂಪತಿಗಳು ರೋಟರಿ ಕ್ಲಬ್ ಮತ್ತು ಹಿರಿಯರ ಸಂಘಗಳಿಗೆ ಅತಿಥಿ ಭಾಷಣ ಮಾಡಲು ಹೋಗತೊಡಗಿದರು.
ಅವರು ಹೊಸ ಯೋಜನೆ ಆರಂಭಿಸಿದರು
ವಿದೇಶಗಳಿಗೆ,ಪಟ್ಟಣಗಳಿದೆ ವಲಸೆ ಹೋಗದೆ ಹಳ್ಳಿಯಲ್ಲಿ
ನೆಲೆಸಿರುವ ಗ್ರಾಮೀಣ ಯುವಕರಿಗೆ ಇಂಗ್ಲಿಷ್, ಯೋಗ, ಬಂಡವಾಳ ಪಾಠ, ಕಲೆ, ಕೃಷಿ ಇತ್ಯಾದಿ ಕಲಿಸಿ.
ಇವರಂತೆ ಅನೇಕ ಹಿರಿಯನ್ನು ಸಂಪರ್ಕಿಸಿ ಹಣ ಸಂಗ್ರಹಿಸಿ ಯುವಕರ ಕನಸುಗಳಿಗೆ ಆರ್ಥಿಕ ನೆರವು ನೀಡುವುದು,ಇತ್ಯಾದಿ ನಿರಂತರ ಚಟುವಟಿಕೆಗಳಲ್ಲಿ ಇಬ್ಬರೂ ಇಂದು Busy.
🌿 ಕಣ್ಣುಗಳಲ್ಲೀಗ ಹೊಸ ಹೊಳಪು.🌿
70ರ ವಯಸ್ಸಿಗೆ ಅವರು “ಹಳೆಯವರು” ಅಲ್ಲ,
ಅವರು ಚಿರಯುವಕರು — ಮನಸ್ಸು ಚುರುಕಾಗಿ, ಕಣ್ಣು ಹೊಳಪಾಗಿ, ದಿನಪತ್ರಿಕೆ ಬದಲು ದಿನಚರಿಯಲ್ಲಿ ಬಿಜಿಯಾಗಿದ್ದರು.
ಒಂದು ದಿನ ಒಂದು ಬಾಲಕಿ ಸುಲೋಚನಮ್ಮನನ್ನು ಅಪ್ಪಿಕೊಂಡು ಹೇಳಿದಳು:
“ಅಜ್ಜಿ, ನಾನು ನಿಮಗಂತೆಯೇ ಹಳೆಯವಳಾಗಬೇಕು”
ಇಂದು ಈ ದಂಪತಿ ಅರ್ಥಮಾಡಿಕೊಂಡಿದ್ದು
ಅವರ ಸೆಕೆಂಡ್ ಇನಿಂಗ್ಸ್ ಕೇವಲ ಅವರದ್ದು ಅಲ್ಲ — ಅದು ನೂರಾರು ಮಂದಿಗೆ ದಾರಿ ತೋರಿಸಬಲ್ಲ ಬೆಳಕು.
🖊ನಿರಂಜನ ಗಿರೀಶ ಭಟ್ಟ, ಯುಕೆ ನೇಚರ್ ಸ್ಟೇ
ಯಲ್ಲಾಪುರ. 94495 67673



















