ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆಗೆ ಶಂಕುಸ್ಥಾಪನೆ !

ಗುರುಮಠಕಲ್ ಸಮಗ್ರ ಅಭಿವೃದ್ಧಿಗೆ ಆಡಳಿತ ಕಛೇರಿಗಳನ್ನು ತರುವೆ- ಕಂದಕೂರು

ಯಾದಗಿರಿ/ ಗುರುಮಠಕಲ್: ಅಮೃತ 2.0ಯೋಜನೆ ಮಾಜಿ ಶಾಸಕ ದಿ. ನಾಗನಗೌಡ ಕಂದಕೂರು ಅವರ ಕನಸಿನ ಯೋಜನೆಯಾಗಿದ್ದು ಅವರ ಅವಧಿಯಲ್ಲಿಯೇ ಅನುಮೋದನೆಯಾಗಿತ್ತು, ಬಹು ಪ್ರಯತ್ನದ ನಂತರ 24.75ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಯೋಜನೆ ಈಗ ಕಾರ್ಯರೂಪಕ್ಕೆ ಬರುತ್ತಿರುವದು ಸಂತೋಷದ ವಿಷಯ ಎಂದು ಶಾಸಕ ಶರಣಗೌಡ ಕಂದಕೂರು ಹೇಳಿದರು.
ಪಟ್ಟಣದ ಹೊರವಲಯದಲ್ಲಿ ಬುಧವಾರ ನಗರಾಭಿವೃದ್ಧಿ ಇಲಾಖೆ ಹಾಗೂ ಯಾದಗಿರಿ ಜಿಲ್ಲಾಡಳಿತ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಬೆಂಗಳೂರು ಮತ್ತು ಗುರುಮಠಕಲ್ ಪುರಸಭೆ ಸಂಯುಕ್ತಾಶ್ರಯದಲ್ಲಿ ಗುರುಮಠಕಲ್ ಪಟ್ಟಣಕ್ಕೆ ಭೀಮಾನದಿ ಮೂಲದಿಂದ ಕೇಂದ್ರ ಪುರಸ್ಕೃತ ಅಮೃತ 2.೦ ಯೋಜನೆಯಡಿಯಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಯ ಅಂದಾಜು ಮೊತ್ತ 2475 ಲಕ್ಷ ರೂ.ಗಳ ಶಂಕುಸ್ಥಾಪನೆ ನೆರೆವೇರಿಸಿ ಅವರು ಮಾತನಾಡಿದರು.
ಈ ಯೋಜನೆಯಡಿ ಪ್ರತಿ ನಿತ್ಯ ಗುರುಮಠಕಲ್ ಪಟ್ಟಣದ ವ್ಯಾಪ್ತಿಯಲ್ಲಿ ಬರುವ 23 ವಾರ್ಡಗಳ 25966 ಜನಸಂಖ್ಯೆಗೆ 135 ಲೀಟರ್ ಪ್ರತಿದಿನ ಪ್ರತಿಯೊಬ್ಬರಿಗೂ ಸರಬರಾಜು ಮಾಡುವದರ ಜೊತೆಗೆ ಮುಂದಾಲೋಚನೆ ದೃಷ್ಟಿಯಿಂದ 2055 ನೆಯ ಸಾಲಿನ ಜನಸಂಖ್ಯೆಗೆ ಅನುಗುಣವಾಗಿ ಸಾರ್ವಜನಿಕರು ಕುಡಿಯುವ ನೀರಿನ ಪ್ರಯೋಜನ ಪಡೆಯಲಿದ್ದಾರೆ ಎಂದು ಅವರು ಹೇಳಿದರು.
ಗುರುಮಠಕಲ್ ಸಮಗ್ರ ಅಭಿವೃದ್ಧಿಗೆ ಬೇಕಾಗುವ ಎಲ್ಲಾ ಕಚೇರಿಗಳ ಸ್ಥಾಪನೆಗೆ ಸಂಬಂಧ ಪಟ್ಟ ಸಚಿವರುಗಳ ಜೊತೆ ಚರ್ಚಿಸಿದ್ದು ಶೀಘ್ರದಲ್ಲಿ ಸಮುದಾಯ ಅರೋಗ್ಯ ಕೇಂದ್ರಕ್ಕೆ ಹೆಚ್ಚುವರಿಯಾಗಿ 50 ಬೆಡ್ ಒದಗಿಸಲಾಗುವುದು, ಒಂದೇ ಸುರಿನಡಿ ಎಲ್ಲಾ ಇಲಾಖೆ ಕಾರ್ಯ ನಿರ್ವಹಿಸಲು ಪ್ರಜಾ ಸೌಧ ನಿರ್ಮಿಸಲು ಹಳೆಯ ಪೋಲಿಸ್ ವಸತಿ ಗೃಹ ಸ್ಥಳದಲ್ಲಿ 8.60 ಕೋಟಿ ವೆಚ್ಚದಲ್ಲಿ ಮೊದಲ ಹಂತದ ಅನುದಾನ ಮಂಜುರಾಗಿದೆ.
ರಿಂಗ್ ರೋಡ್ ನಿರ್ಮಾಣಕ್ಕೆ ಎಲ್ಲಾ ತರಹದ ಸಿದ್ದತೆ ನಡೆದಿದೆ. ಅಪರಾಧ ತಡೆಗೆ ಈಗಾಗಲೇ ತಾಲೂಕಿನಾದ್ಯಂತ 60ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರ ಅಳವಡಿಸಿರುವ ಕುರಿತಾಗಿ ಅವರು ತಿಳಿಸಿದರು.
ಈ ವೇಳೆ ಪುರಸಭೆ ಅಧ್ಯಕ್ಷೆ ಜಯಶ್ರೀ ಪೊಲೀಸ್ ಪಾಟೀಲ್, ಪುರಸಭೆ ಉಪಾಧ್ಯಕ್ಷೆ ರೇಣುಕಾ ಪಡಿಗೆ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಅಭಿಯಂತರರು ನರಸಿಂಹರಡ್ಡಿ ಎನ್, ಯಾದಗಿರಿ ಕರ್ನಾಟಕ ನಗರ ನೀರು ಸರಬರಾಜು, ಗುರುಮಠಕಲ್ ತಾಲೂಕ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಅಂಬರೀಷ ಪಾಟೀಲ, ಶರಣಗೌಡ ಎಇ, ವೀರಣ್ಣ ದೊಡಮನಿ ಗುರುಮಠಕಲ್ ಆರಕ್ಷಕ ನಿರೀಕ್ಷಕರು, ಶಾಂತ ಗೌಡ ಬಿರಾದಾರ ತಹಸೀಲ್ದಾರ್, ಭಾರತೀ ದಂಡೊತಿ ಮುಖ್ಯಾಧಿಕಾರಿ, ಶರಣ ಬಸವ ಸಿಪಿಡಿಒ, ಸುಭಾಷ್ ಕಟಕಟಿ ಜೆಡಿಎಸ್ ಮುಖಂಡರಾದ ಶರಣು ಅವಂಟಿ, ಗುರುಮಠಕಲ್ ಪುರಸಭೆ ಕಿ. ಅಭಿಯಂತರರು ಶ್ರೀ ಅಬ್ದುಲ್ ಅಲೀಮ್, ಪುರಸಭೆ ಸದಸ್ಯರು ಮತ್ತು ನಾಮ ನಿರ್ದೇಶಕ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಯೊಜನೆ ಅನುಮೊದನೆಗೆ ಸಹಕರಿಸಿದ ಸಚಿವ ಸುರೇಶ ಭೈರತಿ ಹಾಗೂ ಮಾಜಿ ಕಾರ್ಯದರ್ಶಿ ಅಜೆಯ ನಾಗಭೂಷಣ ಅವರಿಗೆ ವಿಶೇಷ ಅಭಿನಂದನೆ ವ್ಯಕ್ತಪಡಿಸಿ, ಗುರುಮಠಕಲ್ ಪಟ್ಟಣಕ್ಕೆ ನೂತನ ಪೋಲಿಸ್ ಠಾಣೆ, ನೊಂದಣಿ ಕಾರ್ಯಾಲಯ, ಬಿಇಓ ಕಛೇರಿಗಳನ್ನು ತರಲು ಸಂಬಂಧ ಪಟ್ಟ ಸಚಿವರೊಂದಿಗೆ ಮಾತನಾಡಲಾಗಿದ್ದು ತಾಲೂಕಿನ ಸಮಗ್ರ ಅಭಿವೃದ್ಧಿಗೆ ಕಾರ್ಯನಿರ್ವಹಿಸುವೆ.

  • ಶರಣಗೌಡ ಕಂದಕೂರು ಶಾಸಕರು, ಗುರುಮಠಕಲ್ ಮತಕ್ಷೇತ್ರ.

ವರದಿ ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!