ಕೊಪ್ಪಳ : ನಗರದ ಹನುಮಂತಪ್ಪ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ಗ್ರಾಮೀಣ ಮಹಿಳಾ ಧ್ವನಿ ಸಂಸ್ಥೆ ಹಾಗೂ ಯುವ ಧ್ವನಿ ಮತ್ತು ಗಾನಗಂಟಿ ಫೌಂಡೇಶನ್ ಸಹಯೋಗದಲ್ಲಿ ನಡೆದ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಮ್ಮಿಗನೂರು ಗ್ರಾಮದ ಸರಕಾರಿ ಶತಮಾನ ಶಾಲೆಯ ಗೌರವ ಶಿಕ್ಷಕ ನಿರೂಪಕ ಸಂಪನ್ಮೂಲ ವ್ಯಕ್ತಿ ಎಸ್ ರಾಮಪ್ಪ ಇವರ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದ ಸೇವೆಗಾಗಿ ಕನ್ನಡ ಮಾಣಿಕ್ಯ ಪ್ರಶಸ್ತಿ 2025 ಪ್ರಧಾನ ಮಾಡಿದರು.
ಈ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತೊಗಲು ಗೊಂಬೆ ಕಲಾವಿದೆ ಭೀಮವ್ವ, ಪ್ರಮುಖರಾದ ಭೀಮಣ್ಣ ಹೊರಪೇಟಿ, ಗುರುಬಸವರಾಜ ಹಳ್ಳಿಕೇರಿ, ರೇವಣಸಿದ್ದಪ್ಪ , ದ್ಯಾವಣ್ಣ ಕರಿಗಾರ್ ಸೇರಿದಂತೆ ಫೌಂಡೇಶನ್ ಪದಾಧಿಕಾರಿಗಳು ಇತರರು ಇದ್ದರು
ವರದಿ : ಜಿಲಾನಸಾಬ್ ಬಡಿಗೇರ್



















