
ಕೊಪ್ಪಳ/ ಕುಕನೂರು : ಪಟ್ಟಣದ ಗವಿಶ್ರೀ ನಗರದ ಶ್ರೀ ಶಿರಿಡಿ ಸಾಯಿ ಸೇವಾಶ್ರಮ ಟ್ರಸ್ಟ್ ವತಿಯಿಂದ ಗುರು ಪೂರ್ಣಿಮೆ ಪ್ರಯುಕ್ತ ಜು.10ರ ಗುರುವಾರದಂದು ಶ್ರೀ ಸಾಯಿ ಮಂದಿರದ 7ನೇ ವಾರ್ಷಿಕೋತ್ಸವದ ನಿಮಿತ್ಯ ವಿಶೇಷ ಪೂಜೆ ಮತ್ತು ಪ್ರಸಾದ ಸೇವೆ ಆಯೋಜಿಸಲಾಗಿದೆ ಎಂದು ಸೇವಾ ಟ್ರಸ್ಟ್ ತಿಳಿಸಿದೆ.
ಅಂದು ಬೆಳಿಗ್ಗೆ 5.15 ಕ್ಕೆ ಶ್ರೀ ಶಿರಡಿ ಸಾಯಿಬಾಬಾರವರಿಗೆ ಕಾಕಡಾರತಿ, 6ಗಂಟೆಗೆ ಸುಪ್ರಭಾತ, 7 ಗಂಟೆಗೆ ವಿಶೇಷ ಅಭಿಷೇಕ, 8ಗಂಟೆಗೆ ಬಾಬಾ ಅವರ ವಿರಾಟಸಾಯಿ ಸ್ತೋತ್ರ ಪಠಣ ಮತ್ತು ದೈನಂದಿನ ಪ್ರಾರ್ಥನೆ ಜರುಗುವುದು.
10 ಗಂಟೆಗೆ ಸಾಯಿ ಭಕ್ತರಿಂದ ಗುರುಪೂರ್ಣಿಮೆಯ ವಿಶೇಷ ಬಾಬಾ ಅವರ ಭಜನೆಯ ಹಾಡುಗಳು ಹಾಗೂ ಪೂಜ್ಯ ಗುರುದೇವರು ಶ್ರೀ ಅಮ್ಮುಲ ಸಾಂಬಶಿವರಾವ್ ರವರು ರಚಿಸಿದ ಅಮ್ಮುಲ ಶಿರಡಿ ಸಾಯಿ ತತ್ವ ಬೋಧಾಮೃತಂ ಪುಸ್ತಕಗಳಿಂದ ಸತ್ಸಂಗ ಪ್ರಸಂಗಗಳು ನಡೆಯುವುದು.
ಮಧ್ಯಾಹ್ನ 12ಗಂಟೆಗೆ ಮಧ್ಯಾಹ್ನದ ಆರತಿ 12.30 ಕ್ಕೆ ಸಾಯಿ ಚರಿತೆ. ನಂತರ ಮಧ್ಯಾಹ್ನ 1 ರಿಂದ ಪ್ರಸಾದ ವಿತರಣೆ ನಡೆಯುವುದು.
ಸಾಯಂಕಾಲ 6.15 ಕ್ಕೆ ಆರತಿಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳುವುದು ಎಂದು ಅಮ್ಮುಲ ಸಾಂಬ ಶಿವರಾವ್ ಗುರುಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಕರುನಾಡ ಕಂದ



















