ಮೊಹರಂ ಹಬ್ಬದ ಕತ್ತಲ ರಾತ್ರಿಯ ವಿಶೇಷ ಕುಂಬಾರರು ತಯಾರಿಸಿದ ಮಡಿಕೆಗಳ ಬೇಡಿಕೆ ಕಡಿಮೆಯಾಗುತ್ತಿದೆ.
ಗತವೈಭವದ ಹಿಂದಿನ ಸಂಪ್ರದಾಯದಂತೆ ಮಣ್ಣಿನ ಮಡಿಕೆಯಲ್ಲಿ ಅಡಿಗೆ ಮಾಡುವುದು, ನೀರು, ಹಾಲು, ಮೊಸರು, ಸಂಗ್ರಹಿಸುವುದು ಜನ ಸಾಮಾನ್ಯರು ಕೈ ಬಿಡುತ್ತಿದ್ದಾರೆ ಕುಡಿಕೆ ಮಡಿಕೆಗಳ ಬೇಡಿಕೆ ಕಡಿಮೆಯಾಗಿ ಈಗಿನ ನವಯುಗದ ಸಂಗ್ರಹಿಸುವ ತಂಪಾದ ಫ್ರಿಡ್ಜ್ ಉಪಯೋಗಿಸುತ್ತಿದ್ದಾರೆ ಎಂದು ಕೊಪ್ಪಳ ಜಿಲ್ಲೆ ಕುಕುನೂರು ತಾಲೂಕಿನ ಇಟಗಿ ಗ್ರಾಮದ ಸುಮಿತ್ರಾ ಸುರೇಶ ಕುಂಬಾರ್ ರವರು ಕುಕನೂರು ಪಟ್ಟಣದ ಮೊಹರಂ ಹಬ್ಬದ ನಿಮಿತ್ಯ ಮಣ್ಣಿನ ಮಡಿಕೆ ಮಾರಾಟಕ್ಕೆ ಎಂದು ಬಂದಾಗ ಮಾಧ್ಯಮದೊಂದಿಗೆ ಮಾತನಾಡಿ ಹಿಂದಿನ ಸಂಪ್ರದಾಯದಲ್ಲಿ ಪ್ರತಿಯೊಬ್ಬರೂ ಕುಡಿಕೆ, ಮಡಿಕೆಗಳಲ್ಲಿ ಅಡಿಗೆ ಮತ್ತು ಮೊಸರು, ಹಾಲು ಸಂಗ್ರಹಿಸುವ ಮತ್ತು ಹಬ್ಬ ಹರಿದಿನಗಳಲ್ಲಿ ಕೊಂಡುಕೊಳ್ಳುವ ಸಂಪ್ರದಾಯಗಳು ಇದ್ದವು ಆದರೆ ಈಗಿನ ನವಯುಗದಲ್ಲಿ ಕುಡಿಕೆ ಮಡಿಕೆಗಳ ವ್ಯಾಪಾರ ಅತ್ಯಂತ ಕಡಿಮೆಯಾಗಿದ್ದು ಮಾರಾಟ ಕುಂಟಿತ ಕಂಡುಕೊಂಡಿದೆ. ನಮ್ಮ ಹಿರಿಯರ ವಂಶ ಪಾರಂಪರಿಕವಾಗಿ ಈಗ 30 ರಿಂದ 40 ವರ್ಷ ಈ ಉದ್ಯೋಗವನ್ನೇ ಹರಿಸಿಕೊಂಡು ಬಂದಿದ್ದು. ಈಗಿನ ಕಾಲಘಟ್ಟದಲ್ಲಿ ಕುಡಿಕೆ ಮಡಿಕೆಗಳ ಮಾರಾಟ ಕಡಿಮೆಯಾಗುತ್ತಿದ್ದು ಕುಂಬಾರನ ಬದುಕು ಮಡಿಕೆಯಂತೆ ಒಡೆದು ಹೋಗುತ್ತಿದೆ ಜೀವನ ನಿರ್ವಹಣೆಗೆ ಮಡಿಕೆ ತಯಾರಿಕೆಯಿಂದ ಬಂದ ಆದಾಯದಲ್ಲಿ ಜೀವನ ನಡೆಸುವುದು ತುಂಬಾ ಕಷ್ಟಕರವಾಗಿದೆ ಬೇಡಿಕೆಗಳು ಕಡಿಮೆ ಯಾದಂತೆ ಕುಂಬಾರನಿಗೆ ಆದಾಯ ಕಡಿಮೆಯಾಗುತ್ತದೆ ಜೀವನ ನಿರ್ವಹಣೆ ತುಂಬಾ ಕಷ್ಟವೆನಿಸುತ್ತದೆ ಎಂದು ಮಾತನಾಡಿದರು.
- ಕರುನಾಡ ಕಂದ



















