ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಾಗರ ಪಂಚಮಿ; ನಾಗರ ಮೂರ್ತಿಗೆ ಹಾಲೆರೆದ ಮಹಿಳೆಯರು

ಕಾರಟಗಿ ಪಟ್ಟಣದ ವಿವಿದಢೆ ಸಂಭ್ರಮದಿಂದ ಜರುಗಿದ ನಾಗರ ಪಂಚಮಿ

ಕಾರಟಗಿ : ನಾಗರ ಪಂಚಮಿಯನ್ನು ಪಟ್ಟಣದ ಬಸವೇಶ್ವರ ನಗರದ ಶ್ರೀ ಗುರು ಚಿಕ್ಕಯ್ಯಪ್ಪ ದೇವಸ್ಥಾನ ಬಳಿ ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು.

ಹಬ್ಬದ ಸೋಮವಾರ ದಿನವಾದ 9ನೇ ವಾರ್ಡ್ ಬಸವೇಶ್ವರ ನಗರ ಶ್ರೀ ಗುರು ಚಿಕ್ಕ ಅಯ್ಯಪ್ಪ ದೇವಸ್ಥಾನ ಆವರಣದ ನಾಗದೇವತೆಗಳಿಗೆ ಮಹಿಳೆಯರು, ಮಕ್ಕಳು ಶ್ರದ್ಧಾಭಕ್ತಿಯಿಂದ ಹಾಲೆರೆದು ಪೂಜಿಸಿದರು.

ಕಾರಟಗಿ ಪಟ್ಟಣ ವಿವಿಧ ದೇವಸ್ಥಾನ ಕೋಟೆ ಈರಣ್ಣ, ಶರಣಬಸವೇಶ್ವರ ದೇವಸ್ಥಾನ, ಪನ್ನಾಪುರ ಕ್ರಾಸ್ ಪೋತಪ್ಪನ ಕಟ್ಟಿ, ರಾಜೀವ್ ಗಾಂಧಿನಗರ ಆಂಜನೇಯ ದೇವಸ್ಥಾನ, ಪೊಲೀಸ್ ಕ್ವಾಟ್ರಸ್, ರಾಜು ಗಾಂಧಿ ನಗರಕ್ಕೆ ಹೋಗುವ ದಾರಿಯ ಉರುಕುಂದಿ ಈರಣ್ಣ, ಸಾಲೋಣಿ ಹುಲಿಗೆಮ್ಮ ದೇವಸ್ಥಾನ, ವಾಸವಿ ದೇವಸ್ಥಾನ, ಕೆರಬಸವೇಶ್ವರ, ವೇದರ್ ಮರಿಯಮ್ಮ ದೇವಿ, ಬೂದುಗುಂಪ ರೋಡ್ ಮಾರಿಕಾ ಅಂಬಿಕಾ ದೇವಸ್ಥಾನ, ಸೇರಿದಂತೆ ಹೊಲಗದ್ದೆಗಳಲ್ಲಿನ ನಾಗರ ಕಲ್ಲಿನ ಮೂರ್ತಿಗಳಿಗೆ ಹಾಗೂ ಹುತ್ತಗಳಿರುವ ಸ್ಥಳಕ್ಕೆ ಮಹಿಳೆಯರು ಮಕ್ಕಳು ತೆರಳಿ ಹಾಲೆರೆದು ಪೂಜಿಸಿ ನಾಗ ದೇವರಿಗೆ ನೈವೇದ್ಯ ಅರ್ಪಿಸಿದರು. ಇನ್ನು ಕೆಲ ಓಣಿಗಳಲ್ಲಿ ಮಕ್ಕಳು, ಮಹಿಳೆಯರು ಕೊಬ್ಬರಿ ಆಡಿಸುವುದು ಸೇರಿದಂತೆ ವಿವಿಧ ಆಟಗಳನ್ನು ಆಡಿದರೆ ಇನ್ನು ಕೆಲವರು ಮರಕ್ಕೆ ಹಗ್ಗ ಕಟ್ಟಿ ಜೋಕಾಲಿ ಆಡುವುದು ಹೀಗೆ ವಿವಿಧ ಮನೋರಂಜನೆಯ ಆಟಗಳನ್ನು ಆಡುತ್ತಾ ಹಬ್ಬಕ್ಕೆ ಮಾಡಿದ ವಿವಿಧ ನಮೂನೆಯ ಸಿಹಿ ಭಕ್ಷ್ಯಗಳನ್ನು ಸವಿದರು. ರೈತಾಪಿ ವರ್ಗ ನಾಗರ ಪಂಚಮಿ ಹಬ್ಬವನ್ನು ವೈಭಯುತವಾಗಿ ಆಚರಿಸಿತು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!