
ಕೊಪ್ಪಳ :ರೇಬಿಸ್ ಹುಚ್ಚು ನಾಯಿ ರೋಗವು ಒಂದು ದೊಡ್ಡ ರೋಗ, ಇದನ್ನು 2030 ರೊಳಗೆ ನಮ್ಮ ದೇಶವನ್ನು ರೇಬಿಸ್ ಮುರೇಬಿಸ್ಕ್ತ ಮಾಡಬೇಕು ಎಂದು ಸರಕಾರ ಪಣ ತೊಟ್ಟಿದೆ. ರೇಬಿಸ್ ರೋಗವು ನಾಯಿ ಮತ್ತು ಬೆಕ್ಕು ಕಚ್ಚುವುದರಿಂದ ಬರುವ ರೋಗ, ಈ ರೋಗಕ್ಕೆ ಸೂಕ್ತವಾದ ಚಿಕಿತ್ಸೆ ಇರುವುದಿಲ್ಲ ಎಂದು ಪಶು ವೈದ್ಯಾಧಿಕಾರಿ ಶಿವರಾಜ್ ಶೆಟ್ಟರ್ ಹೇಳಿದರು.

ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶುಕ್ರವಾರದಂದು ಕಾಲೇಜಿನ ರೆಡ್ ಕ್ರಾಸ್ ಘಟಕ ಮತ್ತು ಜಿಲ್ಲಾ ಪಂಚಾಯತ್ ಕೊಪ್ಪಳ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಕೊಪ್ಪಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ರೇಬಿಸ್ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯರಲ್ಲಿ ರೇಬಿಸ್ ರೋಗವು ನಾಯಿ ಕಡಿತದಿಂದ ಬರುತ್ತದೆ. ಬೀದಿ ನಾಯಿಗಳು ಈ ರೋಗ ಹರಡುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮುಂಜಾಗ್ರತೆಯಿಂದ ಲಸಿಕೆ ಹಾಕಿಸಿದರೆ ಈ ರೋಗವನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ರೋಗ ಪೀಡಿತ ನಾಯಿಗಳು, ಕೆಲವೊಮ್ಮೆ ಬೆಕ್ಕುಗಳು ಮತ್ತು ಕಾಡು ನಾಯಿಜಾತಿಗೆ ಸೇರಿದ ಕಾಡು ಪ್ರಾಣಿಗಳು ಕಚ್ಚುವುದರಿಂದ ಈ ರೇಬಿಸ್ ರೋಗ ಹರಡುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಶು ವೈಧ್ಯಧಿಕಾರಿ ಶ್ರೀ ಗೋಣೆಪ್ಪ ವಾಣಿ, ಕಾಲೇಜಿನ ರೆಡ್ ಕ್ರಾಸ್ ಘಟಕದ ಸಂಚಾಲಕ ಡಾ. ಅಶೋಕ ಕುಮಾರ, ಡಾ. ನರಸಿಂಹ ಮತ್ತು ಪಶುಪಾಲನಾ ಇಲಾಖೆಯ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
- ಕರುನಾಡ ಕಂದ



















