ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಕೂಡಾ ದಿನಾಂಕ: 22/09/2025 ರಂದು ಬೆಳಿಗ್ಗೆ 8:00 ಗಂಟೆಗೆ ಸುಕ್ಷೇತ್ರ ತುಳಜಾಪುರದಿಂದ ದಿವ್ಯ ಜ್ಯೋತಿ ಆಗಮಿಸಿದ ನಂತರ ಶ್ರೀ ಆದಿಶಕ್ತಿಯ ಭವ್ಯ ಮೆರವಣಿಗೆಯ ಉದ್ಘಾಟನೆಯನ್ನು 10:00 ಗಂಟೆಗೆ ಮದನ್ ಕುಮಾರ್ ಶಿಂಧೆ ಎ. ಇ. ಇ, ಮಲ್ಲಿಕಾರ್ಜುನ. ಎಂ. ಡಪ್ಪಿನ್ ಸಿ. ಪಿ. ಐ, ಸೋಮೇಶ್ ಗೆಜ್ಜಿ ಪಿ.ಎಸ್.ಐ ಇಂಡಿ ಇವರು ನೆರವೇರಿಸಿ ಕೊಡುವರು.
ಆದಿಶಕ್ತಿಯ ಭವ್ಯ ಮೆರವಣಿಗೆಯು ಸಕಲ ವಾದ್ಯ ವೈಭವಗಳೊಂದಿಗೆ ರಂಗುರಂಗಿನ ಮದ್ದು ಸುಡುವುದರೊಂದಿಗೆ ಪ್ರಮುಖ ಬೀದಿ ಬೀದಿಗಳಲ್ಲಿ ಗಂಗೀರಾಯ ಡೊಳ್ಳಿನ ಸಂಘದವರಿಂದ ಡೊಳ್ಳು ಕುಣಿತ, ಜೈ ಭವಾನಿ ಯುವಕ ಮಂಡಳಿಯಿಂದ ಲೆಜಿಮ್ ಆಟ, ವಿದ್ಯಾರ್ಥಿನಿಯರಿಂದ ಕೋಲಾಟ ಹಾಗೂ ರಾಜಕುಮಾರ್ ಮ್ಯೂಜಿಕಲ್ ಮಾಶಾಳ ಇವರಿಂದ ಸಕಲ ವಾದ್ಯ ವೈಭವಗಳೊಂದಿಗೆ ಜಗನ್ಮಾತೆಯ ಭವ್ಯ ಉತ್ಸವ ಕಾರ್ಯಕ್ರಮವು ಜರಗುವುದು. ನಂತರ ದೇವಿಯ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯುವುದು.
ದಿನಾಂಕ: 23/09/2025 ರಿಂದ 01/10/2025 ರ ವರೆಗೆ ಪ್ರತಿ ದಿನ ಸಾಯಂಕಾಲ 7.30 ಗಂಟೆಗೆ ಪಂಡಿತರತ್ನ ಷ . ಬ್ರ. ಉಪಮನ್ಯು ಶಿವಾಚಾರ್ಯ ಮಹಾಸ್ವಾಮಿಗಳು ಸಿದ್ದಲಿಂಗ ಸಂಸ್ಥಾನ ಹಿರೇಮಠ ಐನಾಪುರ ಸಾ/ ಚಿಂಚೋಳಿ ಇವರಿಂದ ಶ್ರೀ ನವಲಗುಂದ ನಾಗಲಿಂಗ ಪ್ರವಚನ, ಬಸಲಿಂಗಯ್ಯ ಅಂಕಲಗಿ ತಬಲಾ, ಶಿವಪುತ್ರ ಬಿದನೂರ್ ಇವರ ಸಂಗೀತ ಸೇವೆಯೊಂದಿಗೆ ಜರುಗುವುದು.
ದಿನಾಂಕ: 02/10/2025 ರಂದು ಗುರುವಾರ ಬೆಳಗ್ಗೆ 11 ಗಂಟೆಗೆ ಶಂಕರಪ್ರಸಾದ್. ಎಸ್ .ಮಾನೆ F D A ತಹಶೀಲ್ದಾರ್ ಕಾರ್ಯಾಲಯ ವಿಜಯಪುರ ಹಾಗೂ ದಂಪತಿಗಳು ಅಗರಖೇಡ ಇವರಿಂದ ನೆರವೇರುವುದು.
ಅದೇ ದಿನ ಸಾಯಂಕಾಲ 6:00 ಗಂಟೆಗೆ ಶಂಕರಲಿಂಗ ದೇವಸ್ಥಾನದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ನೆರವೇರುವುದು.
ದಿನಾಂಕ:07/10/2025 ರಂದು ಸೀಗೆ ಹುಣ್ಣಿಮೆ ಎಂದು ರಾತ್ರಿ 9:00 ಗಂಟೆಗೆ ಗೊಂದಲ ಕಾರ್ಯಕ್ರಮ ಹಾಗೂ ರಾತ್ರಿ 10 ಗಂಟೆಗೆ ಶಂಕರ್ ಲಿಂಗ ಯುವ ನಾಟಕ ಸಂಘ ಅಗರಖೇಡ ಇವರಿಂದ ಸಾಮಾಜಿಕ ನಾಟಕ ಅಭಿನಯಿಸಲ್ಪಡುವುದೆಂದು ಎಂದು ಜೈ ಭವಾನಿ ಮಂಡಳಿ ಸರ್ವ ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ ಮನೋಜ್ ನಿಂಬಾಳ



















