ಬಳ್ಳಾರಿ / ಕಂಪ್ಲಿ : ಇಲ್ಲಿನ ಸಾಂಗತ್ರಯ ಸಂಸ್ಕೃತ ಪಾಠಶಾಲೆ ಆವರಣದಲ್ಲಿ ಶ್ರೀದೇವಿ ಪುರಾಣ ಮಹೋತ್ಸವ ಸಮಿತಿಯಿಂದ ಹಮ್ಮಿಕೊಂಡ 16ನೇವರ್ಷದ ಶ್ರೀದೇವಿ ಪುರಾಣ ಪ್ರವಚನ ಸೆ.22ರಿಂದ ಅ.2ರತನಕ ನಿತ್ಯ ಸಂಜೆ 6ಗಂಟೆಯಿಂದ ರಾತ್ರಿ 9ಗಂಟೆತನಕ ನಡೆಯಲಿದೆ.
ಬಳೂಟಗಿಯ ಶಿವಕುಮಾರಸ್ವಾಮಿಗಳಿಂದ ಪುರಾಣ ಪ್ರವಚನ, ಸೋಮನಾಳದ ಶರಣಬಸವಕುಮಾರಸ್ವಾಮಿಗಳಿಂದ ಸಂಗೀತ ಮತ್ತು ಪುರಾಣ ಪಠಣ, ಗದುಗಿನ ಪಂಚಾಕ್ಷರಿ ಹೂಗಾರರಿಂದ ತಬಲವಾಧನ ನಡೆಯಲಿದೆ. ವಿಜಯನಗರ ಜನಪದ ಕಲಾವಿದೆ ಸುಮಿತ್ರಮ್ಮ ಪರಶುರಾಮಪ್ಪ ಚಿತ್ರಗಾರರಿಂದ ದೇವಿ ಪ್ರತಿಮೆ ಅಲಂಕಾರ ಇರುತ್ತದೆ. ಸೆ.30ರಂದು ದುರ್ಗಾಷ್ಟಮಿ, ಅ.1ರಂದು ಆಯುಧ ಪೂಜೆ, ಅ.2ರಂದು ವಿಜಯದಶಮಿ ಆಚರಿಸಲಾಗುವುದು ಎಂದು ಸಮಿತಿ ಅಧ್ಯಕ್ಷ ಎಸ್.ಎಸ್.ಎಂ.ಚನ್ನಬಸವರಾ ಜಸ್ವಾಮಿ ತಿಳಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್



















