
ಯಾದಗಿರಿ ಜಿಲ್ಲೆ ಸುರಪುರ ನಿವಾಸದಲ್ಲಿ ಶ್ರೀಮತಿ ದಿ. ರಾಣಿ ಪಾಪಮ್ಮ ಜೇಜಾ ಗಂ. ದಿ. ಶ್ರೀ ರಾಜಾ ಚನ್ನಪ್ಪ ನಾಯಕ ತುಮಕೂರು ಜಹಾಗೀರದಾರ್ ಅವರ ಪುಣ್ಯ ಸ್ಮರಣೆ ಅಂಗವಾಗಿ ಶ್ರೀ ಶ್ರೀ ಶ್ರೀ ಮಹರ್ಷಿ ವಾಲ್ಮೀಕಿ ಆರ್ ಸಿ ನಾಯಕ ಜನಸೇವೆ ಶೈಕ್ಷಣಿಕ ಟ್ರಸ್ಟ್ ರಿ. ಸುರಪುರ ವತಿಯಿಂದ ಉಚಿತ ತಪಾಸಣೆ ಹಾಗೂ ಆಯುರ್ವೇದಿಕ್ ಔಷಧಿ ವಿತರಣೆ ಕಾರ್ಯಕ್ರಮ ಮತ್ತು ಅನ್ನದಾಸೋಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ರಿ. ಅಧ್ಯಕ್ಷರಾದ ವೈದ್ಯ ಶ್ರೀ ಆನಂದ್ ಡಿ ಹೇರೂರು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀ ಶ್ರೀ ಶ್ರೀ ಮಹರ್ಷಿ ವಾಲ್ಮೀಕಿ ಆರ್ ಸಿ ನಾಯಕ ಜನಸೇವೆ ಶೈಕ್ಷಣಿಕ ಟ್ರಸ್ಟ್ ಕಾರ್ಯವೈಖರಿ ಬಗ್ಗೆ ತುಂಬಾ ಮೆಚ್ಚುಗೆ ವ್ಯಕ್ತ ಪಡಿಸಿದರು.
ಟ್ರಸ್ಟಿನ ಅಧ್ಯಕ್ಷರಾದ ಶ್ರೀ ರಾಜಾ ಚನ್ನಪ್ಪ ನಾಯಕ ಅವರು ಜನರಿಗೆ ಉಪಯುಕ್ತ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ ಜೊತೆಗೆ ಇವರ ಕಾರ್ಯಗಳು ನಾಲ್ಕು ಜನರಿಗೆ ಮಾದರಿಯಾಗಿ ಉಳಿಯುತ್ತವೆ, ದೇವರು ಇವರಿಗೆ ಇನ್ನೂ ಇಂತಹ ಅನೇಕ ಕಾರ್ಯಕ್ರಮ ಮಾಡಲು ಹೆಚ್ಚು ಶಕ್ತಿ ನೀಡಲೆಂದು ಆಶಿಸಿದರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜಾ ಚನ್ನಪ್ಪ ನಾಯಕ (ಪುಟ್ಟು) ಅವರು ನಮ್ಮ ಟ್ರಸ್ಟಿನ ಅಡಿಯಲ್ಲಿ ಅನೇಕ ಉಚಿತ ಆರೋಗ್ಯ ಕಾರ್ಯಕ್ರಮ ಮತ್ತು ಶಿಕ್ಷಣ ಕಾರ್ಯಕ್ರಮ, ಅನ್ನದಾಸೋಹ ಕಾರ್ಯಕ್ರಮವನ್ನು ಹಮ್ಮಿಕೊಂಡು ಯಶಸ್ವಿಯಾಗಿ ಮಾಡಿದ್ದೇವೆ ಇನ್ನು ಮುಂದೆಯೂ ಕೂಡಾ ನಿಮ್ಮ ಆಶೀರ್ವಾದ, ಬೆಂಬಲ ಇದ್ರೆ ಇನ್ನೂ ಹತ್ತಾರು ಕಾರ್ಯಕ್ರಮ ಮಾಡುತ್ತೇವೆ ಎಂದರು. ವೈದ್ಯ ರಾಘವೇಂದ್ರ ಸುಗಂಧಿ ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ( ರಿ. ) ಯಾದಗಿರಿ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಗಳು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ರಾಜಾ ದೇವರಾಜ ನಾಯಕ ಕರಡಕಲ್ ಜಹಾಗೀರದಾರ್ ಸ್ವಾಗತಿಸಿದರು, ರಾಜಾ ಅಮರೇಶ ನಾಯಕ ವಂದಿಸಿದರು ನೀಲಕಂಠ ಪತ್ತಾರ, ಬಲಭೀಮ ನಾಯಕ, ಅಂಬರೀಶ್ ಜಂಪಾಲ್ದರ್ ಹಾಗೂ ಟ್ರಸಿನ ಅನೇಕ ಸದಸ್ಯರು ಮತ್ತು ಸುತ್ತ ಸುತ್ತಮುತ್ತಲಿನ ಊರಿನ ನಾಗರಿಕರು ಉಪಸ್ಥಿತರಿದ್ದರು. ನೂರಾರು ಜನರಿಗೆ ಔಷಧಿ ವಿತರಣೆ ಮಾಡಲಾಯಿತು.
ವರದಿ ಹನುಮಂತಪ್ಪ ನಾಯಕ



















