ಕೊಪ್ಪಳ : ಕನ್ನಡ ಸಾಹಿತ್ಯ ದ ಶ್ರೇಷ್ಠ ಕಾದಂಬರಿಕಾರರೂ, ಸಾಹಿತಿಗಳೂ ಆಗಿದ್ದ ಎಸ್. ಎಲ್.ಭೈರಪ್ಪ ಅವರು ತೊಂಬತ್ನಾಲ್ಕು ವರ್ಷಗಳ ತುಂಬು ಜೀವನ ನಡೆಸಿ, ವಯೋಸಹಜ ಕಾಯಿಲೆಗೆ ಈಡಾಗಿ, ಇಹಲೋಕವನ್ನು ತ್ಯಜಿಸಿದ ಭೈರಪ್ಪನವರು, ತಮ್ಮ ಜೀವಿತಾವಧಿಯಲ್ಲಿ, ನಾಯಿ ನೆರಳು, ವಂಶವೃಕ್ಷ, ಪರ್ವ, ಜಲಪಾತ, ಮತದಾನ, ತಬ್ಬಲಿಯು ನೀನಾದೆ ಮಗನೆ, ದಾಟು, ಗ್ರಹಭಂಗ, ಮುಂತಾದ ಸುಮಾರು ಇಪ್ಪತ್ತೈದಕ್ಕಿಂತ ಹೆಚ್ಚು ಕಾದಂಬರಿಗಳನ್ನು, ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿ, ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದ್ದಾರೆ, ಇವರಿಗೆ ಸರ್ವಶ್ರೇಷ್ಠ ಪ್ರಶಸ್ತಿ ಗಳಲ್ಲಿ ಒಂದಾದ ಸರಸ್ವತಿ ಸಮ್ಮಾನ್, ಪದ್ಮ ಭೂಷಣ, ಕೇಂದ್ರ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳೂ ಲಭಿಸಿವೆ, ಇವರ ಹಲವಾರು ಕೃತಿಗಳು ವಿವಿಧ ಭಾಷೆಗಳಿಗೆ ಅನುವಾದ ಗೊಂಡಿವೆ, ಅವರ ಸಾವು ಕನ್ನಡ ನಾಡಿಗೆ ತುಂಬಲಾರದ ನಷ್ಟವಾಗಿದೆ, ಅವರಿಗೆ ಭಾವಪೂರ್ಣ ಶೃಧ್ಧಾಂಜಲಿ ಅರ್ಪಿಸೋಣ, ಎಂದು ಶಿವಪ್ರಸಾದ್ ಹಾದಿಮನಿ, ಅವರು ನುಡಿ ನಮನ ಕಾರ್ಯಕ್ರಮದಲ್ಲಿ ಭಾಗಹಿಸಿ ಮಾತನಾಡಿದರು, ಇದೇ ಸಂದರ್ಭದಲ್ಲಿ, ಡಾ. ಮಹಾಂತೇಶ ನೆಲಾಗಣಿ, ಎ. ಪಿ. ಅಂಗಡಿ, ಅನ್ನಪೂರ್ಣ ಮನ್ನಾಪುರ, ಶಿವಪ್ಪ ಕೊಗಳಿ, ನಾಗರತ್ನ ಬನ್ನಿ ಕೊಪ್ಪ, ರುದ್ರಪ್ಪ ಭಂಡಾರಿ, ಮುಂತಾದವರು, ಭೈರಪ್ಪನವರ ಸಾಹಿತ್ಯವನ್ನು ಸ್ಮರಿಸಿ, ಅವರಿಗೆ ನುಡಿನಮನ ಸಲ್ಲಿಸಿದರು.
ಎಸ್. ಎಲ್. ಭೈರಪ್ಪ, ಅವರಿಗೆ ನುಡಿನಮನ
ಸಭೆಯಲ್ಲಿ ಕೊಪ್ಪಳ ಜಿಲ್ಲಾ ಮತ್ತು ಕೊಪ್ಪಳ ತಾಲೂಕು, ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಮತ್ತು ಸದಸ್ಯರುಗಳಾದ, ರುದ್ರಪ್ಪ ಭಂಡಾರಿ, ಮಹಾಂತೇಶ ನೆಲಾಗಣಿ, ಶಿವಪ್ರಸಾದ್ ಹಾದಿಮನಿ, ಎ. ಪಿ. ಅಂಗಡಿ, ನಾಗರತ್ನ ಬನ್ನಿ ಕೊಪ್ಪ, ಶಿವಪ್ಪ ಕೋಗಳಿ,
ಅನ್ನಪೂರ್ಣ ಮನ್ನಾಪುರ, ಪ್ರದೀಪ ಕುಮಾರ್ ಹದ್ದಣ್ಣವರ್, ಗಂಗಾದರ ಖಾನಾಪುರ ಅವರು ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
- ಕರುನಾಡ ಕಂದ



















