
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಮೂರು ದಿನಗಳ ನಿರಂತರ ಮಳೆಗೆ ಹೆಬ್ಬಾಳ ಗ್ರಾಮದ ನಿವಾಸಿಯಾದ ಪರಿಸರ ಪ್ರೇಮಿ ಹಾಗೂ ರಕ್ತದಾನಿಯಾದ ಉಮೇಶ ಬಿ ತಂದೆ ಸುಖಮುನಿಯಪ್ಪ ಅವರ ಮನೆ ಕುಸಿದಿದೆ ಯಾವ ಪ್ರಾಣಾಪಾಯ ಆಗಿರುವುದಿಲ್ಲ. ನಿರಂತರ ಮಳೆಗೆ ಮನೆ ತಡರಾತ್ರಿಯಲ್ಲಿ ಎಕಾಏಕಿ ಕುಸಿದಿದೆ ಹಾಗೂ ಮನೆ ಮೇಲ್ಚಾವಣಿ ಬಿದ್ದಿದೆ.
ಗ್ರಾಮದ ವಿಲೇಜ್ ಅಕೌಂಟ್ ಹಾಗೂ ಗ್ರಾ.ಪಂಚಾಯತಿ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹಾಗೂ ಸುದ್ದಿ ತಿಳಿದ ಬಳಿಕ ರೆಡ್ಡಿ ಶ್ರೀನಿವಾಸ್ ಕೊಪ್ಪಳ ಜಿಲ್ಲಾಧ್ಯಕ್ಷರು ಗ್ಯಾರಂಟಿ ಯೋಜನೆಗಳ ಪ್ರಾಧಿಕಾರ ದೊಡ್ಡ ಭರಮಣ್ಣ ಕಿಸಾನ್ ಸೇನಾ ರೈತ ಸಂಘ ಜಿಲ್ಲಾಧ್ಯಕ್ಷರು ಸಣ್ಣ ಪಾತಪ್ಪ ಟಿ ಧರ್ಮಣ್ಣ ಉಮೇಶ್ ಬರೂಗುರು ದ್ಯಾಮಣ್ಣ ಗೋಲಿ ಪರೀಶಿಲಿಸಿದರು.
- ಕರುನಾಡ ಕಂದ



















