ಮ್
ನಮ್ಮ ನಾಡಿನ ಅದೆಷ್ಟು ಜನ ರಾಜಕೀಯ ನಾಯಕರುಗಳು ಲಿಂಗಾಯತ ಕೋಟಾದ ಅಡಿಯಲ್ಲಿ ಏನಲ್ಲವನ್ನೂ ಪಡೆದುಕೊಂಡಿದ್ದಾರೆ ಎಂದು ಹೇಳುವುದಕ್ಕೂ ಕಷ್ಟ…ಇನ್ನು ನಿರಂತರವಾಗಿ ಪಡೆಯುತ್ತಿದ್ದಾರೆ. ಎಲ್ಲವನ್ನೂ ಪಡೆದುಕೊಂಡು ಸುಖ ನಿದ್ರೆಯಲ್ಲಿದ್ದಾರೆ. ವಿಶೇಷವಾಗಿ ಎಲ್ಲಾ ಅನುಕೂಲಗಳನ್ನು ಅವರ ಮಕ್ಕಳಿಗೂ, ಮೊಮ್ಮಕ್ಕಳಿಗೂ ಧಾರೆಯೆರೆದು ಧನ್ಯರಾಗಿದ್ದಾರೆ.
ಇಂತಹ ನಾಯಕರು ಲಿಂಗಾಯತ ಧರ್ಮದ ಕೂಗಿಗೆ ಧ್ವನಿ ಕೊಡದೆ ಸ್ವಾರ್ಥ ರಾಜಕೀಯ ಅಮಲಿನಲ್ಲಿ ತೆಲಾಡುತ್ತಿದ್ದಾರೆ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು.
ಲಿಂಗಾಯತರ ಸಂಕಟದ ಸಮಯದಲ್ಲಿ ದೂರ ನಿಂತು ತಮ್ಮ ಹೇಡಿತವನ್ನು ಪ್ರದರ್ಶನ ಮಾಡುತ್ತಿದ್ದಾರೆ.
ಲಿಂಗಾಯತ ಧರ್ಮದವರು ನಾವು ಎಂದು ಹೇಳಿಕೊಳ್ಳುವುದಕ್ಕೆ ಅವರಿಗೆಲ್ಲ ನಾಚಿಕೆಯಾಗುತ್ತಿದೆ.
ಬಸವಾದಿ ಶರಣರ ತತ್ವ ಸಿದ್ಧಾಂತದ ಕುರಿತು ಕನಿಷ್ಠ ಪಕ್ಷ ಅರಿವು ಇರಬೇಕಾಗಿತ್ತು. ಅದು ಇಲ್ಲ. ದುರಂತದ ಸಂಗತಿಯೆಂದರೆ ಈ ಬಗ್ಗೆ ಅವರಿಗೆಲ್ಲಾ ಆಸಕ್ತಿ ಇಲ್ಲ. ಮೇಲಾಗಿ ಅಭಿಮಾನವಂತೂ ಮೊದಲೇ ಇಲ್ಲ.
ಆದರೆ ಈ ವಿಷಯದಲ್ಲಿ ಕರ್ನಾಟಕ ರಾಜ್ಯದ ಭಾವಿ ಮುಖ್ಯಮಂತ್ರಿಗಳೆಂದೇ ಬಿಂಬಿತವಾಗಿರುವ ಸರಳ ಸ್ನೇಹಜೀವಿಗಳು, ಸಾಮಾಜಿಕ ಸೇವಕರು, ಅಭಿವೃದ್ಧಿ ಹರಿಕಾರರಾದಂತ ಎಂ. ಬಿ. ಪಾಟೀಲರು ಮಾತ್ರ ಲಿಂಗಾಯತ ಧರ್ಮದ ಬಗ್ಗೆ ಆಳವಾದ ಐತಿಹಾಸಿಕ ಪ್ರಜ್ಞೆಯನ್ನು ಹೊಂದಿದ್ದಾರೆ ಎನ್ನುವುದು ಬಹಳ ಸಂತೋಷ ಪಡುವ ಸಂಗತಿಯಾಗಿದೆ. ಆದ್ದರಿಂದಲೇ ಅವರು ಹಲವಾರು ರಾಜಕೀಯ ಏಳು ಬೀಳುಗಳ ನಡುವೆಯೂ ಬಸವಣ್ಣ ಪ್ರಣೀತ ಲಿಂಗಾಯತ ಧರ್ಮವನ್ನು ಗಟ್ಟಿಯಾಗಿ ಹಿಡಕೊಂಡು ಹೊರಟಿದ್ದಾರೆ.
ಅಷ್ಟೇ ಅಲ್ಲ ಲಿಂಗಾಯತ ಧರ್ಮದ ಕುರಿತು ವೈಜ್ಞಾನಿಕ ಮತ್ತು ವೈಚಾರಿಕವಾಗಿ ಮಾತನಾಡುತ್ತಾರೆ.
ತತ್ವಕ್ಕಾಗಿ ತಮ್ಮ ರಾಜಕೀಯ ಭವಿಷ್ಯವನ್ನು ಪಟಕ್ಕಿಡಲು ಯಾವ ಲಿಂಗಾಯತ ರಾಜಕೀಯ ಮುಖಂಡ ಹಿಂಜರಿಯುತ್ತಿರುವ ಈಗಿನ ಸಂದರ್ಭದಲ್ಲಿ ಸನ್ಮಾನ್ಯ ಶ್ರೀ ಎಂ.ಬಿ.ಪಾಟೀಲ ದಿಟ್ಟ ನಡೆ ನಾಡಿಗೆ ಹಾಗೂ ದೇಶಕ್ಕೆ ಮಾದರಿ.
ಈ ಮೂಲಕ ನಾನು ಲಿಂಗಾಯತ ಧರ್ಮೀಯ ಎಂದು ಸಾರಿ ಸಾರಿ ಹೇಳಿದ್ದಾರೆ. ಮತ್ತು ಈ ಗಟ್ಟಿತನಕ್ಕೆ
ಲಿಂಗಾಯತ ಧರ್ಮಿಯರು ಹಾಗೂ ನಾಡಿನ ಪ್ರಜ್ಞಾವಂತ ನಾಗರಿಕರು ತುಂಬು ಹೃದಯದಿಂದ, ಹೃದಯಸ್ಪರ್ಶಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.
ಲಿಂಗಾಯತ ಧರ್ಮದ ಸಾಂವಿಧಾನಿಕ ಮಾನ್ಯತೆಗಾಗಿ ಎಂ. ಬಿ. ಪಾಟೀಲ್ ಅವರ ಹೋರಾಟ ನಿರಂತರವಾಗಿ ಸಾಗಲಿ ಇಡೀ ಲಿಂಗಾಯತ ಧರ್ಮೀಯರು ನಿಮ್ಮ ಜೊತೆಗಿದ್ದಾರೆ ಎನ್ನುವ ನೈತಿಕ ನುಡಿಗಳು ಈ ಸಂದರ್ಭದಲ್ಲಿ ಹೇಳುತ್ತಾ, ಭವಿಷ್ಯ ದಿನಗಳಲ್ಲಿ ಎಂ. ಬಿ ಪಾಟೀಲ್ ಅವರ ರಾಜಕೀಯ ಜೀವನ ವಿಶ್ವಕ್ಕೆ ಮಾದರಿಯಾಗಲೆಂದು ಆಶಿಸುತ್ತೇವೆ.
ಜನ್ಮದಿನದ ಶುಭಕಾಮನೆಗಳು:
ಜನ್ಮದಿನದ ಹಾರ್ದಿಕ ಶುಭಕಾಮನೆಗಳು, ಶುಭಾಶಯಗಳು ಕೋರುತ್ತೇವೆ. ಬಸವಾದಿ ಶರಣರ ಅನುಗ್ರಹ ಆಶೀರ್ವಾದ ಸದಾ ಕಾಲ ನಿಮ್ಮ ಮೇಲಿರಲಿ ಎಂದು ಪ್ರಾರ್ಥಿಸಿ ಶುಭ ಹಾರೈಸುತ್ತೇವೆ.
- ಸಂಗಮೇಶ ಎನ್ ಜವಾದಿ.
ಬರಹಗಾರರು, ಪತ್ರಕರ್ತರು, ಪರಿಸರ ಸಂರಕ್ಷಕರು, ಹೋರಾಟಗಾರರು, ಬೀದರ್ ಜಿಲ್ಲೆ.



















