ಕೊಪ್ಪಳ : ಗಂಗಾವತಿ ತಾಲೂಕಿನ ಡಣಾಪೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ
72ನೇ ಅಖಿಲ ಭಾರತ ಸಹಕಾರ ಸಪ್ತಾಹ -2025 ಪ್ರಯುಕ್ತ ಡಣಾಪೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಧ್ವಜಾರೋಹಣ ಮಾಡಲಾಯಿತು.
ಸಹಕಾರ ಪಿತಾಮಹ ಕಣಗಿನಹಾಳ ಸಿದ್ದನಗೌಡ ಪಾಟೀಲ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಹಕಾರ ಸಪ್ತಾಹ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಎನ್ ರಾಮಬಾಬು ಹಾಗೂ ಸಂಘದ ನಿರ್ದೇಶಕರು , ರೈತರಾದ ನರಸಯ್ಯ ಎಂ. ಹಾಗೂ ಈರಣ್ಣ ಬಡಿಗೇರ , ಮಂಜುನಾಥ ಹೆಚ್ , ಭುವನೇಶ ಎಂ., ಕಾರ್ಯದರ್ಶಿ ಹನುಮೇಶ ಭಾವಿಕಟ್ಟಿ , ಕೆ. ಬುಡ್ಡಪ್ಪ , ಪಂಪನಗೌಡ , ಮಂಜುನಾಥ , ತಿಪ್ಪೇಸ್ವಾಮಿ ಭಾಗಿ ಇದ್ದರು.
- ಕರುನಾಡ ಕಂದ



















