
ಕೊಪ್ಪಳ ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶನಿವಾರ ದಂದು ವೃಕ್ಷಮಾತೆ ಎಂದೇ ಹೆಸರು ಪಡೆದ ಸಾಲುಮರದ ತಿಮ್ಮಕ್ಕನವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಗಣಪತಿ ಲಮಾಣಿಯವರು ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿನಿಯರು ಸಾಲುಮರದ ತಿಮ್ಮಕ್ಕನಂತೆ ನಿಮ್ಮ ನಿಮ್ಮ ಮನೆಗಳ ಮುಂದೆ ಎರಡು ಸಸಿಗಳನ್ನು ಹಾಕುವಂತೆ ತಿಳಿಸಿದರು. ಸಾಲುಮರದ ತಿಮ್ಮಕ್ಕನವರು ಮಾತೃ ಹೃದಯ ಭಾವನೆಯಿಂದ ಮರಗಳನ್ನು ಬೆಳೆಸಿ ಎಲ್ಲರಿಗೂ ಜೀವವನ್ನು ನೀಡಿದ ಮಹಾನ್ ಮಹಿಳೆ ಎಂದು ಸ್ಮರಿಸುತ್ತಾ ವಿದ್ಯಾರ್ಥಿನಿಯರೆಲ್ಲ ತಿಮ್ಮಕ್ಕನವರ ಜೀವನವನ್ನು ಮಾದರಿಯನ್ನಾಗಿ ಮಾಡಿಕೊಳ್ಳಬೇಕೆಂದು ತಿಳಿಸಿದರು.
ನಂತರ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಹುಲಿಗೆಮ್ಮ ಇವರು ಸಾಲುಮರದ ತಿಮ್ಮಕ್ಕನವರ ಜೀವನ ಕುರಿತು ಹೇಳುತ್ತಾ ಸಾಲುಮರದ ತಿಮ್ಮಕ್ಕನವರು ಮಾತೃ ಹೃದಯದ ತಾಯಿ ಎಂದು ಹೇಳಿದರು. ಅಲ್ಲವೇ ಮಕ್ಕಳಿಲ್ಲದ ಕೊರಗನ್ನು ತಿಮ್ಮಕ್ಕನವರು ಮರ ಗಿಡಗಳನ್ನು ಬೆಳೆಸುತ್ತಾ ಮಕ್ಕಳ ಪ್ರೀತಿಯನ್ನು ಪ್ರಕೃತಿಯಲ್ಲಿ ಅನುಭವಿಸಿದರು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕರಾದ ಶುಭ ಟಿ.ಇ, ಡಾ ಪ್ರದೀಪ್ ಕುಮಾರ್, ಸುಮಿತ್ರ ಎಸ್.ವಿ, ಸುಮಯ್ಯ ಕೆ, ಸಂತೋಷ್ ಬೆಲ್ಲದ, ಡಾ ಮಲ್ಲಿಕಾರ್ಜುನ.ಡಾ ಪ್ರಕಾಶ ಹುಲ್ಲೂರ್, ಬಸಮ್ಮ, ಕಸ್ತೂರಿ, ಉಮಾದೇವಿ, ನಿಂಗಜ್ಜ ಸೋಂಪುರ, ಕಲ್ಯಯ್ಯ ಪೂಜಾರ್, ಶ್ರೀಕಾಂತ್ ಹಾಗೂ ಕಾಲೇಜಿನ ಎಲ್ಲಾ ಬೋಧಕೇತರ ಸಿಬ್ಬಂದಿಗಳು, ಅತಿಥಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
- ಕರುನಾಡ ಕಂದ ಪತ್ರಿಕೆ



















