
ಕೊಪ್ಪಳ : ಕಾರಟಗಿ ತಾಲೂಕಿನ ಮೂಸ್ಟೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹ -2025 ಪ್ರಯುಕ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮುಸ್ಟೂರು ಸಂಘದ ಆವರಣದಲ್ಲಿ ಧ್ವಜಾರೋಹಣ ಮಾಡಲಾಯಿತು.
ಈ ಸಂದರ್ಭದಲ್ಲಿ ಸಹಕಾರ ಪಿತಾಮಹ ಕಣಿಗನಾಳ ಸಿದ್ದನಗೌಡ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಸಹಕಾರ ಸಪ್ತಾಹ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಯರ್ರಿಸ್ವಾಮಿ ಕುಂಟೋಜಿ ಹಾಗೂ ಉಪಾಧ್ಯಕ್ಷರಾದ ತಾಜುದ್ದೀನ್ ಸಾಬ್ ಮುಸ್ಟೂರು, ಸಂಘದ ಕಾರ್ಯದರ್ಶಿಗಳಾದ ಶರಣಪ್ಪ ಕಂಪ್ಲಿ ಹಾಗೂ ಪಿ.ರಾಘವೇಂದ್ರ ಢಣಾಪುರ , ಸಂಘದ ಆಡಳಿತ ಮಂಡಳಿ, ಸದಸ್ಯರು ,ಸಂಘದ ಸಿಬ್ಬಂದಿ ಹಾಗೂ ಊರಿನ ಗುರು ಹಿರಿಯರು ಭಾಗಿಯಾಗಿದ್ದರು.
ವರದಿ ಹನುಮೇಶ ಭಾವಿಕಟ್ಟಿ



















