ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಟಕಲ್ ಗ್ರಾಮದ ಲಿಂಗೈಕ್ಯ ಮುರುಘೇಂದ್ರ ಶಿವಯೋಗಿಗಳ 62ನೇ ಜಾತ್ರಾ ಮಹೋತ್ಸವ

ಸದೃಢ ಭಾರತ ನಿರ್ಮಾಣಕ್ಕೆ ಸಂಸ್ಕಾರಯುತ ಶಿಕ್ಷಣ ಅಗತ್ಯವಾಗಿದೆ ಎಂದ ಹುಲಸೂರಿನ ಶ್ರೀಗಳು

ಕಲ್ಬುರ್ಗಿ : ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಗ್ರಾಮದ ವಿರಕ್ತಮಠದಲ್ಲಿ ಐದು ದಿನಗಳ ಕಾಲ ಜೀವನ ದರ್ಶನ ಪ್ರವಚನ ಸಾಗಿ ಬಂದಿದ್ದು ನಿನ್ನೆ ದಿವಸ ರವಿವಾರರಂದು ಸಾಯಂಕಾಲ 7: 00 ಗಂಟೆಗೆ ರಥೋತ್ಸವ ಕಾರ್ಯಕ್ರಮ ಜರುಗಿತು.
ಇದಕ್ಕಿಂತ ಪೂರ್ವದಲ್ಲಿ ಬೆಳಗಿನ ಜಾವ ಮುರುಘೇಂದ್ರ ಶಿವಯೋಗಿಗಳ ಮೂರ್ತಿಗೆ ಮಹಾಭಿಷೇಕ, ಧ್ವಜಾರೋಹಣ, ಮತ್ತು ಮೂರ್ತಿಯ ಭವ್ಯ ಪಲ್ಲಕ್ಕಿ ಉತ್ಸವ ಊರ ಪ್ರಮುಖ ಬೀದಿಯಲ್ಲಿ ಸಾಗಿ ಬಂದು ಗೌರಿ ಗುಡ್ಡಕ್ಕೆ ತೆರಳಿ ಗುಡ್ಡದ ಗುಡಿಯ ಗೋಪುರಕ್ಕೆ ಕಳಸಾರೋಹಣ ನೆರವೇರಿತು.
ಪೂಜ್ಯರು ಆಶೀರ್ವಚನದಲ್ಲಿ ” ಇದಕ್ಕೆ ಉತ್ತಮವಾದ ಸಂಸ್ಕಾರದ ಕೊರತೆ ಎದ್ದು ಕಾಣುತ್ತದೆ ಕಾರಣ ಸದೃಢ ಭಾರತ ನಿರ್ಮಾಣಕ್ಕೆ ಸಂಸ್ಕಾರಯುತ ಶಿಕ್ಷಣ ಅಗತ್ಯವಾಗಿದೆ ” ಎಂದು ಹುಲಸೂರಿನ ಪೂಜ್ಯ ಶ್ರೀ ಡಾ.ಶಿವಾನಂದ ಸ್ವಾಮಿಗಳು ನುಡಿದರು.

ರವಿವಾರ ಸಂಜೆ ನಡೆದ ರಥೋತ್ಸವದ ನಂತರ ಧರ್ಮ ಸಭೆಯನ್ನುದ್ದೇಶಿಸಿ ಅವರು ಆಶೀರ್ವಚನ ನೀಡುತ್ತಾ
ನಮ್ಮ ದೇಶದ ಭವಿಷ್ಯ, ಯುವಕರ ಕೈಯಲ್ಲಿರುವುದರಿಂದ ಯುವಕರು ದೊಡ್ಡ ಸಂಪತ್ತು ಇದ್ದಂತೆ ಈ ಸಂಪತ್ತನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಹಿರಿಯರು ಮತ್ತು ಗುರುಗಳು ಸೂಕ್ತ ಮಾರ್ಗದರ್ಶನ ನೀಡುವುದು ಮುಖ್ಯ ಎಂದರು.

ಪುರವಂತರ ಕುಣಿತದೊಂದಿಗೆ ಅಪಾರ ಸದ್ಭಕ್ತರ ಸಮ್ಮುಖದಲ್ಲಿ ಮಹಾ ರಥೋತ್ಸವ ಅದ್ದೂರಿಯಾಗಿ ಜರುಗಿತು. ಸದ್ಭಕ್ತರು ರಥಕ್ಕೆ ತೆಂಗು, ಬಾಳೆಹಣ್ಣು, ಉತ್ಪತ್ತಿ, ನಾರು ನಾಣ್ಯ ಎಸೆದು ಭಕ್ತಿಯಿಂದ ಸೇವೆಗೈದರು.
ಈ ಕಾರ್ಯಕ್ರಮದಲ್ಲಿ ರಟಕಲ್ ಶ್ರೀ ಮುರುಘೇಂದ್ರ ವಿರಕ್ತಮಠದ ಪೂಜ್ಯರಾದ ನೀಲಕಂಠ ದೇವರು, ಭರತನೂರ ಪೂಜ್ಯ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು, ಮುತ್ಯಾನ ಬಬಲಾದ ಪೂಜ್ಯ ಡಾ.ಗುರುಪಾದಲಿಂಗ ಮಹಾಸ್ವಾಮಿಗಳು, ರಟಕಲ್ ಪೂಜ್ಯ ರೇವಣಸಿದ್ಧ ಶಿವಾಚಾರ್ಯರು, ಗೌರಿಗುಡ್ಡದ ರೇವಣಸಿದ್ಧ ಶರಣರು, ​​ಮುಖಂಡ ಚಿಂತನ ರಾಠೋಡ, ರಟಕಲ್ ಪಿ ಎಸ್ ಐ ಶೀಲಾದೇವಿ, ಬಸವರಾಜ ಚೌಕ, ಸಿದ್ದಯ್ಯಸ್ವಾಮಿಕಿಣ್ಣಿ, ಶರಣಬಸಪ್ಪ ಪಾಟೀಲ, ಶಿವರಾಜಪ್ಪ ಭೀಮ್ಗಳ್ಳಿ, ರೇವಣಸಿದ್ದಪ್ಪ ಕುರುಕೋಟಿ, ರಾಜಶೇಖರ ಗುರುಮಿಟ್ಕಲ, ಶಿವರಾಜ ಚೌಕ, ರಾಚಯ್ಯ ಕಿಣಿ, ರೈತ ಮುಖಂಡ ಶರಣಬಸಪ್ಪಮಮಶೆಟ್ಟಿ, ರೈತ ನಾಯಕ ವೀರಣ್ಣ ಗಂಗಾಣಿ, ಶಂಕರ ಚೋಕ, ನೀಲಕಂಠ ಮಾಲಿ ಪಾಟೀಲ್, ಮಲ್ಲಣ್ಣ ಸೀಗಿ, ಚಂದ್ರಕಾಂತ ಸೀಗಿ, ರಾಜಶೇಖರ್ ಬುಕ್ಕಟಗಿ, ಮುರಗೆಪ್ಪ ನಾಗೂರ, ಮಲ್ಲು ಚಿಕ್ಕಗಿಸಿ, ನೀಲಕಂಠ ಕೊಡದೂರ, ಸಿದ್ದು ಅರಣಕಲ್. ವೀರೇಶ್ ಬುಕ್ಕಟಗಿ, ರಾಘವೇಂದ್ರ ಗುಂಡನೋರ, ಶರಣು ಸೀಗಿ, ಶರಣಯ್ಯ ಕಿಣ್ಣಿ, ಆಕಾಶ ಸಾಲಿಮಠ, ಜಗನ್ನಾಥ ನಾಗಾ, ಪ್ರಕಾಶ್ ಬಡಿಗೇರ, ಶಿವಶರಣ ಕಲಶೆಟ್ಟಿ, ಪ್ರಜ್ವಲ್ ದುದಗಿಮಠ, ರವಿ ಬುಳ್ಳ, ಗೌರಿಶಂಕರ್ ಕಿಣ್ಣಿ ನಿರೂಪಿಸಿದರು. ಸುತ್ತ ಮುತ್ತ ಗ್ರಾಮಸ್ಥರು ಭಾಗವಹಿಸಿದ್ದರು.

ವರದಿ ಚಂದ್ರಶೇಖರ್ ಆರ್ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!