ತುಮಕೂರು ಜಿಲ್ಲೆಯ ಮಧುಗಿರಿ ಉಪ ವಿಭಾಗ ಮಟ್ಟದ ಬಹುಜನರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ ಕೊಡಿಗೇನಹಳ್ಳಿಯಿಂದ ಮಧುಗಿರಿಯವರೆಗೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ರಾಜ್ಯಾಧ್ಯಕ್ಷರಾದ ಮಾರಸಂದ್ರ ಮುನಿಯಪ್ಪ ಅವರು ಮಾತನಾಡಿ ” ಈ ದೇಶದಲ್ಲಿ ಬ್ರಾಹ್ಮಣರು 101 ಜಾತಿಗಳನ್ನು ಮಾಡಿದ್ದಾರೆ ಬಸವಣ್ಣ, ಮಾದರ ಚೆನ್ನಯ್ಯ ಬಸವ ತತ್ವಗಳನ್ನು ಹುಟ್ಟು ಹಾಕಿದ್ದಾರೆ ಅವರ ಕನಸು ಜಾತಿ ಮುಕ್ತ ದೇಶವನ್ನಾಗಿ ಮಾಡುವುದಾಗಿತ್ತು, 2,600 ವರ್ಷಗಳಿಂದ ಇದೇ ಕೆಲಸವನ್ನು ಭಗವಾನ್ ಬುದ್ಧ ಅವರು ಮಾಡಿದ್ದಾರೆ, ಬಡವರ ಪರವಾಗಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಹೋರಾಟ ಮಾಡಿದ್ದಾರೆ ಈ ದೇಶದಲ್ಲಿ ಇತರರಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಎಲ್ಲರನ್ನೂ ಒಂದು ಕಡೆ ತಂದು ಈ ದೇಶವನ್ನು ಡಚ್ಚರು, ಬ್ರಿಟಿಷರು, ಮಹಾರಾಜರು ಪಾಳೇಗಾರರು ಈ ದೇಶವನ್ನು ಆಳಿದ್ದಾರೆ ಎಂದು ಹೇಳಿದರು.
ತಾಲೂಕು ಅಧ್ಯಕ್ಷರಾದ ನಾಗಭೂಷಣ್ .ಹೆಚ್. ಗರಣಿ ಮಾತನಾಡಿ “ನಾವು ಈಗ ಹಮ್ಮಿಕೊಂಡಿರುವ ಕಾಲ್ನಡಿಗೆ ಜಾಥಾ ಯಶಸ್ವಿಯಾಗಿದ್ದು ಅಧಿಕಾರಿಗಳು ನಮ್ಮ ಮನವಿಗಳನ್ನು ಸ್ವೀಕರಿಸಿ ಬಹುಬೇಗ ಪರಿಹರಿಸಲಿಲ್ಲವೆಂದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಗುರುಮೂರ್ತಿ , ಜಿಲ್ಲಾಧ್ಯಕ್ಷರು ಡಿ ಭರತ್ ಕುಮಾರ್ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ, ಜಿಲ್ಲಾ ಸಂಯೋಜಕರು ಜಿ ಎಸ್ ಮಂಜುನಾಥ್, ತಾಲೂಕು ಅಧ್ಯಕ್ಷರು ನಾಗಭೂಷಣ್ ಎಚ್., ತಾಲೂಕು ಪ್ರಧಾನ ಕಾರ್ಯದರ್ಶಿ ನಾಗರಾಜು , ನಿವೃತ್ತ ಸೈನಿಕರು ಗೌರಿಬಿದನೂರು ವೆಂಕಟೇಶ್, ಜಿಲ್ಲಾ ಸಂಚಾಲಕರು ಟಿ. ಎಮ್. ಮಂಜಯ್ಯ, ನಟರಾಜು ,ಅಂಜಪ್ಪ , ಲಕ್ಷ್ಮಮ್ಮ , ನಾಗಮಣಿ, ರಂಗನಾಥ್, ಮಲ್ಲೆ ರಂಗಯ್ಯ ,ಲೋಕಮಾತ, ಅರುಂಧತಿ ಸೆಕ್ಯುಲರ್, ಅಶ್ವಥ್ ಪ್ರದೀಪ್ ಕುಮಾರ್, ರಾಮಕೃಷ್ಣಪ್ಪ ,ಸೋಮಣ್ಣ, ರಂಗನಾಥ್ ಸೇರಿದಂತೆ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ ರಂಗರಾಜು .ಎಮ್.



















