ಶ್ರೀರಾಮ ಎನ್ನುವ ಎರಡಕ್ಷರದಲ್ಲಿ
ಅಡಗಿದೆ ಅದ್ಬುತ ದಿವ್ಯ ಶಕ್ತಿಯು
ಮಾತೆ ಸೀತೆಯ ಅಭಯ ಹಸ್ತವು
ಮಾಡಿದೆ ಆಶೀರ್ವಾದ ಬದುಕಲ್ಲಿ ll
ಶ್ರೀರಾಮ ಜಯ ರಾಮ
ಕರುಣೆಯ ಕಡಲು ಕಾರುಣ್ಯ ಮೂರ್ತಿ
ಕಾಮಿತ ವರವ ಕೂಡುವ ನೀತ
ಕನಕಕವಚವ ಧರಿಸಿದನೀತಾ
ಧರೆಯ ಉದ್ದರಿಪ ಕೊಡುಗೈ ದಾತ ll
ಶ್ರೀ ರಾಮ್ ಜಯ ರಾಮ
ದಶರಥ ರಾಜನ ಯಜ್ಞದ ಸುತನೀತ
ಕೌಸಲ್ಯ ಮಾತೆಯ ಮುದ್ದಿನ ಕಂದನೀತ
ಸೀತಾಮಾತೆಯ ಹೃದಯ ವಲ್ಲಭ ನೀತ
ಜನಕರಾಜನ ಮೆಚ್ಚಿದ ಅಳಿಯನೀತ
ಶ್ರೀ ರಾಮ ಜಯ ರಾಮll
ಸಹೋದರರ ನಡುವೆ ಅಗ್ರಜನೀತ
ಲವಕುಶರ ನಲ್ಮೆಯ ಪಿತೃ ನೀತ
ಪ್ರಜೆಗಳ ಪಾಲಿಗೆ ರಘು ನಂದನನೀತ
ಅಯೋದ್ಯೆಯ ನಗರದ ದೈವಿ ಪುರುಷನೀತ
ಶ್ರೀ ರಾಮ ಜಯ ರಾಮll
ದುಷ್ಟರ ಪಾಲಿಗೆ ಅಜಾತ ಶತ್ರುವೀತ
ದೇವಗಣಗಳ ಸದಾ ರಕ್ಷಕನೀತ
ವಸುದೆಯೊಳಗೆ ಶಾಂತ ರೂಪನೀತ
ವನ ಮಾಲೆಯ ಕೊರಳೋಳು ಧರಿಸಿಹ ನೀತ
ಶ್ರೀರಾಮ ಜಯರಾಮ ll
ಸ್ವಾಮಿ ಆಂಜನೇಯನ ಹೃದಯಸಿಂಹಾಸ ನೀತ
ಅನಂತ ಶಕ್ತಿಯ ಮಹಿಮನೀತ
ಅನಂತ ಗುಣ ಸಂಪನ್ನನೀತ
ಭಕ್ತರಿಗೂಲಿವ ಅಯೋಧ್ಯ
ಪುರದೀಶನೀತ
ಶ್ರೀರಾಮ ಜಯರಾಮll
- ಶಿವಸುತೆ,
ಡಾ ವೇದಾವತಿ ಬಿ ರಾವ್
ಬೆಂಗಳೂರು ಆನೇಕಲ್( T)




















