ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪುಸ್ತಕ ವಿಮರ್ಶೆ : ವಚನ ಸಿರಿ

ಪುಸ್ತಕದ ಹೆಸರು.
“ವಚನ ಸಿರಿ”
ಆಧುನಿಕ ವಚನಗಳು.
ಲೇಖಕರು : ಶ್ರೀಮತಿ ಗೀತಾ ಎನ್. ಮಲ್ಲನಗೌಡ್ರ.
ಶಶಾಂಕ ಪ್ರಕಾಶನ, ಸೋಂಪುರ. ತಾ.ಕುಕನೂರು.
ಜಿ. ಕೊಪ್ಪಳ. 583232..

ಹೃದಯ ತಟ್ಟುವ “ವಚನ ಸಿರಿ “ಯ ಆಧುನಿಕ ವಚನಗಳು.

ಕುಂತಳ ನಾಡೆಂದು ಐತಿಹಾಸಿಕ ಪ್ರಸಿದ್ಧಿ ಪಡೆದ ಕೊಪ್ಪಳ ಜಿಲ್ಲೆಯ ಕುಕನೂರು, ಧಾರ್ಮಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿಯೂ ತನ್ನದೇ ಆದ ಛಾಪು ಮೂಡಿಸಿದೆ. ಇಂತಹ ಐತಿಹಾಸಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಹಿನ್ನೆಲೆ ಹೊಂದಿರುವ, ಕುಕನೂರಿನ ಪಕ್ಕದಲ್ಲೇ ಇರುವ ಸೋಂಪುರ ಗ್ರಾಮದವರಾದ ಶ್ರೀಮತಿ ಗೀತಾ ಎನ್. ಮಲ್ಲನಗೌಡ್ರ ಅವರಿಂದ ರಚಿತವಾದ ವಚನಗಳ ಹೊತ್ತಿಗೆ, ವಚನ ಸಿರಿ, ಎಂಬ ಆಧುನಿಕ ವಚನಗಳ ಮೇಲೆ ಕಣ್ಣಾಡಿಸಿದಾಗ, ನಾನು ಕಂಡುಕೊಂಡ ಹಾಗೆ ಈ ಪುಸ್ತಕದಲ್ಲಿನ ವಚನಗಳನ್ನು
ಕುರಿತು, ವಿಮರ್ಶೆ ಮಾಡಿರುವುದನ್ನು ಸಹೃದಯ
ರೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ಬರೆದಿರುವ
ನನ್ನ ವಿಮರ್ಶೆಯ ಬರಹವಿದು.

ವೃತ್ತಿಯಿಂದ ಶಿಕ್ಷಕಿ, ಪ್ರವೃತ್ತಿಯಿಂದ ಲೇಖಕಿ, ಕವಿಯತ್ರಿ ಯೂ ಆಗಿರುವ ಶ್ರೀಮತಿ ಗೀತಾ ಅವರು ಕನ್ನಡ
ಸಾರಸ್ವತ ಪ್ರಪಂಚಕ್ಕೆ ತಮ್ಮ ಕವನ ಸಂಕಲನದ ಮೂಲಕ ಈಗಾಗಲೇ ಪರಿಚಿತರಾಗಿದ್ದಾರೆ.

ಅವರ ಎರಡನೇ ಕೃತಿ, ಆಧುನಿಕ ವಚನಗಳ
ವಚನ ಸಿರಿ, ವಿಶ್ವಕ್ಕೆ ವಚನ ಸಾಹಿತ್ಯವನ್ನು ನೀಡಿದ ಕೀರ್ತಿ, ಪುರಾತನ ವಚನಕಾರರಿಗೆ ಸಲ್ಲುತ್ತದೆ. ಈ ಸಾಹಿತ್ಯವನ್ನು
ಜೀವಂತವಾಗಿರಿಸಿ ಅದರ ಕೀರ್ತಿಯನ್ನು ಜಗದಾದ್ಯಂತ
ಹಬ್ಬಿಸಿದ್ದು ಆಧುನಿಕ ವಚನಕಾರರಿಗೆ ಸಲ್ಲುತ್ತದೆ. ಅಂತಹ ಆಧುನಿಕ ವಚನಕಾರರಲ್ಲಿ ಶ್ರೀಮತಿ ಗೀತಾ, ಎನ್. ಮಲ್ಲನಗೌಡ್ರು ಒಬ್ಬರಾಗಿರುವುದು ನಮಗೆಲ್ಲಾ ಹೆಮ್ಮೆಯ ವಿಷಯ.

“ಶಾಂತಾ ಸುತೆ ” ಅಂಕಿತ ನಾಮ (ಕಾವ್ಯ ನಾಮ)ದಿಂದ
292 ವಚನಗಳನ್ನು ಬರೆದು ವಚನ ಸಿರಿ ಎನ್ನುವ ಮೌಲಿಕ ಕೃತಿಯನ್ನು ಪ್ರಕಟಿಸಿರುವ ಗೀತಾ ಮಲ್ಲನಗೌಡ್ರು, ಆಧುನಿಕ ವಚನಕಾರ್ತಿಯಾಗಿ
ತಮ್ಮನ್ನು ವಚನ ಸಾಹಿತ್ಯಕ್ಕೆ ಸಮರ್ಪಿಸಿಕೊಂಡಿದ್ದಾರೆ, ಎಂಬುದು ಈ ವಚನ ಸಂಕಲಲನವನ್ನು ನೋಡಿದ, ಓದಿದ ಯಾರಿಗೇ ಆಗಲಿ ಗೊತ್ತಾಗದೇ ಇರದು. ಇವರ ವಚನಗಳನ್ನು ಓದಿದಾಗ ನನಗೂ ಇದು ಸ್ಪಷ್ಟವಾಗಿ
ಅರ್ಥವಾಯಿತು.
ಈ ಸಂಕಲನದ ಪ್ರಥಮ ವಚನ ಬಸವಣ್ಣನವರ
ವಚನವನ್ನು ನೆನಪಿಸುತ್ತದೆ.

ವಚನದ ಕೆಲ ಸಾಲುಗಳನ್ನು
ಗಮನಿಸಿದಾಗ..
ಎನ್ನ ಮನವ ಮಲ್ಲಿಗೆಯ ಮಾಡಯ್ಯ,
ಎನ್ನ ನುಡಿಯ ಮೃದು ಮಾಡಯ್ಯ,
ಎನ್ನ ದುರಾಸೆಯ ದೂರ ಮಾಡಯ್ಯ,
ಎನ್ನ ಅತಿಯಾಸೆಯ ಅಳಿಸಿ
ಹಾಕಯ್ಯ, ಎಂಬಂತಹ ಸಾಲುಗಳು,
ಬಸವಣ್ಣನವರ
ಅತ್ತಲಿತ್ತ ಹೋಗದಂತೆ
ಎನ್ನ ಹೆಳವನ ಮಾಡಯ್ಯ,
ಸುತ್ತ ಸುಳಿದು ನೋಡದಂತೆ
ಅಂಧಕನ ಮಾಡಯ್ಯ ಎಂಬ ವಚನವನ್ನು ನೆನಪಿಸುತ್ತದೆ. ಅದೇ ರೀತಿಯ ಮತ್ತೊಂದು ವಚನ ಓದುಗರ ಗಮನ ಸೆಳೆಯುವಲ್ಲಿ ಸಫಲವಾಗಿದೆ.
ಅದು ಈ ಕೆಳಗಿನಂತಿದೆ.
“ಜನನ ನೀನು ಮರಣ ನೀನು
ಬಲ ನೀನು, ಫಲ ನೀನು,
ಭಕ್ತಿ ನೀನು, ಶಕ್ತಿ ನೀನಯ್ಯ,
ಏನೆಲ್ಲ ನೀನು ಇರುವಾಗ
ನನ್ನದೆಂಬುದು ಏನಿಲ್ಲ!!.
ಎಲ್ಲಾ ನಶ್ವರ ನೋಡಯ್ಯ! ಈ ವಚನವನ್ನು ಓದಿದಾಗ, ಬಸವಣ್ಣ ನವರ
ತಂದೆ ನೀನು,ತಾಯಿ ನೀನು ಬಂಧು ನೀನು, ಬಳಗ ನೀನು
ಎಂಬ ವಚನ ಓದಿದಂತೇ ಅನಿಸುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ
ವಚನಕಾರರ ಗಾಢ ಪ್ರಭಾವ
ಇವರ ಮೇಲಾದಂತಿದೆ ಎಂದು ಹೇಳಿದರೆ ಅತಿಶಯೋಕ್ತಿಯಾಗದೇನೋ..
ಸಂಕಲನದ ಬಹುತೇಕ ವಚನಗಳು” ಅಕ್ಕಮಹಾದೇವಿ, ಅಲ್ಲಮಪ್ರಭು, ಆಯ್ದಕ್ಕಿ ಲಕ್ಕಮ್ಮ, ಸಿದ್ದರಾಮ, ಗಂಗಾಂಬಿಕೆ, ಮುಂತಾದವರ ವಚನಗಳನ್ನು ಓದಿದಂತೇ ಭಾಸವಾಗುತ್ತದೆ.
ಜೊತೆಗೆ ಜ್ಞಾನಕ್ಕೆ ಸಂಬಂಧಿಸಿದ ಕೆಲವು ವಚನಗಳು ಗಮನ ಸೆಳೆಯುತ್ತವೆ.
ಉದಾಹರಣೆಗೆ..
“ಜ್ಞಾನವುಳ್ಳ ಮನವು
ತುಂಬಿದ ಕೊಡದಂತಯ್ಯ,
ಜ್ಞಾನ ವಿಲ್ಲದ ಮನವು ಅರ್ಧ
ಕೊಡದಂತಯ್ಯ,
ಅವರವರ ನಡೆ ನುಡಿ
ಅವರ ವ್ಯಕ್ತಿತ್ವ, ಸಾರಿ ಹೇಳುತ್ತದೆ ಎಂದಳು
ಶಾಂತಾ ಸುತೆ.”
ಈ ವಚನದಲ್ಲಿ, ಪ್ರತ್ಯೇಕವಾಗಿ ಎಂದಳು ಎಂಬ ಪದಬಳಕೆ, ವಾಚ್ಯತೆಯೆನಿಸಿದರೂ ವಚನ ತುಂಬಾ ಅರ್ಥ ಗರ್ಭಿತವಾಗಿ ಮೂಡಿಬಂದಿದೆ. ಇಂಥದೇ ಮತ್ತೊಂದು ವಚನ ಕೂಡಾ ಇಲ್ಲಿರುವುದನ್ನು ಗಮನಿಸಿ,
ಜ್ಞಾನವೇ ಹೆಚ್ಚು, ಜ್ಞಾನವೇ ಮೆಚ್ಚು, ಜ್ಞಾನವೇ ಬೆಳಕು,
ಜ್ಞಾನವೇ ಬದುಕು,
ಜ್ಞಾನವಿದ್ದೊಡೆ ತೊಳೆಯುವುದು ಜನರ ಹೊಲಸು, ಜ್ಞಾನದಿಂದಲೇ ಜಗದ ಉಧ್ಧಾರ.. ಎಂದು ಹೇಳುವ ವಚನಕಾರ್ತಿ, ಮುಂದುವರಿದು ವಿಜ್ಞಾನವನ್ನು ಒಪ್ಪಿ ಅಜ್ಞಾನದ ತೆರೆ ಸರಿಸೋಣ, ಎನ್ನುತ್ತಾರೆ. ಇಲ್ಲಿ ಇವರ ವೈಚಾರಿಕ ಪ್ರಜ್ಞೆ ಅನಾವರಣವಾಗಿದೆ.
ಸಮಾಜ ಸುಧಾರಣೆಯ ಸಂದರ್ಭದಲ್ಲಿ ಸಾಹಿತಿಗಳ, ವಚನಕಾರರ ಪಾತ್ರ ಅತ್ಯಂತ ಹಿರಿದಾದುದು. ಅಂತೆಯೇ ಹನ್ನೆರಡನೇ ಶತಮಾನದಲ್ಲಿ
ಶಿವಶರಣರನೇಕರು, ವಚನಕಾರು, ಸಾಮಾಜಿಕ ಕ್ರಾಂತಿಗೆ ಕಾರಣರಾಗಿದ್ದನ್ನು ನಾವಿಲ್ಲಿ ಸ್ಮರಿಸಬಹುದು.
ಬದಲಾವಣೆ ಜಗದ ನಿಯಮ, ಕೇವಲ ಸಾಹಿತಿಗಳಿಂದ, ವಚನಕಾರರಿಂದಲೇ ಜಗ ಪರಿವರ್ತನೆ ಯಾಗುತ್ತದೆ ಎಂಬ ಮಾತು ಭ್ರಮೆ, ಆದರೆ
ಸಾಮಾಜಿಕ ಕ್ರಾಂತಿಯಲ್ಲಿ ಸಾಹಿತಿಗಳ, ವಚನಕಾರರ,
ಬುದ್ಧಿಜೀವಿಗಳ ಪಾತ್ರ ಇದೆ, ಎಂಬುದನ್ನು ಸಾಮಾಜಿಕರೆಲ್ಲರೂ ಒಪ್ಪಿಕೊಳ್ಳಬೇಕಾದ ಸತ್ಯ.
ಈ ಹಿನ್ನೆಲೆಯಲ್ಲಿ ಆಧುನಿಕ ವಚನಕಾರ್ತಿಯಾಗಿ ಗುರುತಿಸಿಕೊಂಡಿರುವ
ಶ್ರೀಮತಿ ಗೀತಾ. ಎನ್ ಮಲ್ಲನಗೌಡ್ರ ಪಾತ್ರವೂ ಇದೆ,
ಎಂದು ಬೇರೆ ಹೇಳಬೇಕಿಲ್ಲ.
ಅಂದಿನ ಸಾಮಾಜಿಕ ಕ್ರಾಂತಿಗೆಕಾರಣವಾದ ವಚನ ಸಾಹಿತ್ಯ, ಇಂದಿನ ಸಾಮಾಜಿಕ ಕ್ರಾಂತಿಗೂ ಕಾರಣವಾಗಿದೆ ಎಂದರೆ ಆ ವಚನಗಳಿಗಿರುವ ಶಕ್ತಿ ಎಷ್ಟೆಂದು ಗೊತ್ತಾಗುತ್ತದೆ.
ಗೀತಾ ಮಲ್ಲನಗೌಡರು ರಚಿಸಿರುವ ಈ ವಚನದ ಹೊತ್ತಿಗೆಯ ಬಹುತೇಕ ವಚನಗಳು ಓದಿಸಿಕೊಂಡು ಹೋಗುವ ಸಾಮರ್ಥ್ಯ ಹೊಂದಿ, ಸಹೃದಯರ ಹೃದಯಕ್ಕೆ ತಟ್ಟುವಂಥವುಗಳಾಗಿವೆ, ಅವರಿಂದ ಇನ್ನೂ ಉತ್ತಮವಾದ ವಚನಗಳು ರಚನೆಯಾಗಲಿ, ಅವರಲ್ಲಿ ಆ ಸಾಮರ್ಥ್ಯವಿದೆ.
ಎಂಬ ಸದಾಶಯದೊಂದಿಗೆ
ನನ್ನ ಈ ವಿಮರ್ಶಾ ಬರಹಕ್ಕೆ ವಿರಾಮ ನೀಡುವೆ..

  • ಶಿವಪ್ರಸಾದ್ ಹಾದಿಮನಿ.
    ಕನ್ನಡ ಉಪನ್ಯಾಸಕರು,
    ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು,
    ಕೊಪ್ಪಳ. 583231.
    ಮೊಬೈಲ್. 7996790189.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!