15 ನೇ ವರ್ಷದ ಜ್ಞಾನ ಕಾರಂಜಿ ಪೂರ್ವ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಸಂಭ್ರಮದಿಂದ ಜರುಗಿತು.
ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಹೊಸಳ್ಳಿ ಎಚ್. ಕ್ರಾಸ್ ಶ್ರೀಮತಿ ಶ್ರೀದೇವಿ ಈ ಸ್ಮರಣಾರ್ಥ ಶಿಕ್ಷಣ ಮತ್ತು ಸಾಮಾಜಿಕ ಟ್ರಸ್ಟ್ (ರಿ. )ಮರಪಳ್ಳಿ ಅವರ ಜ್ಞಾನ ಕಾರಂಜಿ ಪೂರ್ವ ಪ್ರಾಥಮಿಕ ಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆ 15ನೇ ಶಾಲಾ ವಾರ್ಷಿಕೋತ್ಸವ ಅದ್ದೂರಿಯಾಗಿ ಜರುಗಿತು.
ಈ ಕಾರ್ಯಕ್ರಮದಲ್ಲಿ ಶ್ರೀ ಸಿದ್ದಲಿಂಗ ಶಿವಾಚಾರ್ಯರು ಶ್ರೀ ಕ್ಷೇತ್ರ ಹಿರೇಮಠ ಸಂಸ್ಥಾನ ಹೊಸಳ್ಳಿ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ವಿವಿಧ ಕಾರ್ಯಚಟುವಟಿಕೆಗಳಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಮಾಡಿದರು. ನಂತರ ಕಾರ್ಯಕ್ರಮದಲ್ಲಿ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದರು.
ಈ ಸಂದರ್ಭದಲ್ಲಿ ವಿರೇಶ್ ಜಮಾದಾರ್ ಶಾಲೆಯ ಮುಖ್ಯ ಗುರುಗಳು ಸೂರ್ಯ ಕಿರಣ್ ಹಾಗೂ ಶಿಕ್ಷಕರ ಶಿಕ್ಷಕಿಯರು ಸಿಬ್ಬಂದಿ ವರ್ಗದವರು ಪಾಲಕರು ಶಾಲೆಯ ಮುದ್ದು ಮಕ್ಕಳು ಉಪಸ್ಥಿತರಿದ್ದರು.
ವರದಿ ಚಂದ್ರಶೇಖರ್ ಆರ್. ಪಾಟೀಲ್




















