ಬೆಂಗಳೂರು : ನಗರ ಗಾಂಧಿಭವನದಲ್ಲಿ ಲೇಬರ್ ರೈಟ್ಸ್ ಫೋರಂ ಮತ್ತು ಗೃಹ ರಕ್ಷಕರ ಮಹಿಳಾ ಸಂರಕ್ಷಣಾ ಸಮಿತಿ ಲವತಿಯಿಂದ ಆಯೋಜಸಿದ್ದ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ, ವರ್ಷಪೂರ್ತಿ ಕರ್ತವ್ಯ ಮತ್ತು ಸಮಾನ ವೇತನ ಕೊಡಬೇಕೆಂದು ಕಳೆದ ಮೂರು ವರ್ಷಗಳಿಂದ ಒತ್ತಾಯ ಮಾಡುತ್ತಾ ಬಂದಿದ್ದೇವೆ. ಸೇರಿಸಿಕೊಳ್ಳುವಾಗ ಎಲ್ಲರಿಗೂ ಒಂದೇ ಮಾನದಂಡದಲ್ಲಿ ನೇಮಕಾತಿ ಮಾಡಿಕೊಂಡು, ವೇತನ ಕೆಲವರಿಗೆ 15 ಸಾವಿರ ಮತ್ತೆ ಕೆಲವರಿಗೆ 18 ಸಾವಿರ ಮತ್ತು ಕೆಲವರಿಗೆ 24 ಸಾವಿರ ಈ ರೀತಿ ವೇತನದಲ್ಲಿ ತಾರತಮ್ಯ ಮಾಡುವುದನ್ನು ನಿಲ್ಲಿಸಿ, ಎಲ್ಲರಿಗೂ ಒಂದೇ ರೀತಿಯ ಸಮಾನ ವೇತನ ನೀಡಬೇಕು. ಕಳೆದ ವರ್ಷ ನೀಡಿದ ಆದೇಶದಲ್ಲಿ ಡ್ಯೂಟಿಯಲ್ಲಿ ಮರಣ ಹೊಂದಿರುವ ಗೃಹ ರಕ್ಷಕರ ಕುಟುಂಬಕ್ಕೆ ಮಾತ್ರ ಹತ್ತು ಲಕ್ಷ ಹಿಡಿಗಂಟು ನೀಡುವ ನಿಯಮಾವಳಿ ತಿದ್ದುಪಡಿ ಮಾಡಿ ಕೆಲಸಕ್ಕೆ ಸೇರಿದಾಗಿನಿಂದ ನಿವೃತ್ತಿ ಆಗುವವರೆಗೆ ಯಾವುದೇ ಸಂದರ್ಭದಲ್ಲಿ ಆಕಸ್ಮಿಕ ಮರಣ ಹೊಂದಿದರೆ ಅಂತಹ ಗೃಹರಕ್ಷಕರಿಗೂ ಹತ್ತು ಲಕ್ಷ ಹಿಡಿಗಂಟು ನೀಡಬೇಕು ಹಾಗೂ ಮಹಿಳೆಯರಿಗೆ ವಿಶೇಷ ಭತ್ಯೆ ನೀಡಬೇಕು ಎಂದು ಒತ್ತಾಯಿಸಿದರು.
ನಂತರ ಮಹಿಳಾ ಸಾಧಕಿಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ವರದಿ : ಜಿಲಾನಸಾಬ್ ಬಡಿಗೇರ್




















