ಸಿರುಗುಪ್ಪ- ನಮ್ಮ ವೈವಿಧ್ಯಮಯ ಸಂಸ್ಕೃತಿ ಮತ್ತು ಪರಂಪರೆಯನ್ನು ಗೌರವಿಸುವುದು ಮತ್ತು ಕಾಪಾಡುವುದು ಪ್ರತಿಯೊಬ್ಬ ಭಾರತೀಯನ ಸಂವಿಧಾನ ಬದ್ಧ ಮೂಲಭೂತ ಕರ್ತವ್ಯ ಎಂದು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಬಿ ಎಂ ನಾಗರಾಜ ಅವರ ಹಿರಿಯ ಸಹೋದರ ಬಿ ಎಂ ಸತೀಶ್ ಅವರು ಹೇಳಿದರು.
ಸಿರುಗುಪ್ಪ ನಗರದ ಅಂಬಾನಗರ ಜಗಜೀವನ ರಾಮ್ ಸರ್ಕಲ್ ನಲ್ಲಿ ಕರ್ನಾಟಕ ಸರ್ಕಾರ ತಾಲೂಕು ಆಡಳಿತ ತಾಲೂಕು ಪಂಚಾಯತ್ ಸಮಾಜ ಕಲ್ಯಾಣ ಇಲಾಖೆ ನಗರ ಸಭೆ ಎಲ್ಲಾ ಇಲಾಖೆಗಳ ಸಹ ಭಾಗಿತ್ವದಲ್ಲಿ ಹಸಿರು ಕ್ರಾಂತಿಯ ಹರಿಕಾರ ರಾಷ್ಟ್ರ ನಾಯಕ ಹಾಗೂ ಭಾರತದ ಮಾಜಿ ಉಪ ಪ್ರಧಾನಮಂತ್ರಿ ಡಾ. ಬಾಬು ಜಗಜೀವನ್ ರಾಮ್ ಅವರ 119ನೇ ಜನ್ಮದಿನಾಚರಣೆ ಡಾ ಬಾಬು ಜಗಜೀವನ್ ರಾಮ್ ಅವರ ನಾಮಫಲಕಕ್ಕೆ ಮಾಲಾರ್ಪಣೆ ಹಾಗೂ ಭಾವಚಿತ್ರಕ್ಕೆ ಗೌರವ ಪೂರ್ವಕ ಪುಷ್ಪ ಗೌರವದೊಂದಿಗೆ ಸ್ಮರಿಸಿ ನೆನಪಿಸಿ ಅವರು ಮಾತನಾಡುತ್ತಾ ದೇಶದ ಪ್ರಗತಿಯಲ್ಲಿ ನಮ್ಮ ಪ್ರಗತಿ ಇದೆ ದೇಶದ ಉದ್ಧಾರದಲ್ಲೇ ನಮ್ಮ ಉದ್ಧಾರವಿದೆ ಎಂದು ಕರೆ ನೀಡಿದರು ತಾಲೂಕ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಡ್ಡೇರು ಸಿದ್ದಯ್ಯ ಅವರು ಮಾತನಾಡಿ ಜಗಜೀವನ್ ರಾಮ್ ಅವರು ಬಿಹಾರ್ ರಾಜ್ಯದ ಭೋಜಪುರ ಜಿಲ್ಲಾ ಚಂದ್ ವಾ ಗ್ರಾಮದಲ್ಲಿ ಶೋಭಾ ರಾಮ್ ವಾಸಂತಿ ದೇವಿ ದಂಪತಿಗಳ ಉದರದಲ್ಲಿ 5 ಏಪ್ರಿಲ್ 1908 ರಲ್ಲಿ ಜನಿಸಿದರು ಅವರ ಕುರಿತು ಉಪನ್ಯಾಸ ನೀಡಿದರು. ದಲಿತ ಸಂಘರ್ಷದ ಮುಖ್ಯಸ್ಥ ಹೆಚ್ ಬಿ ಗಂಗಪ್ಪ ಅವರು ಜಗಜೀವನ್ ರಾಮ್ ರವರ ಜಯ ಘೋಷ ಘೋಷಿಸಿದರು ಡಾ ಬಿ ಆರ್ ಅಂಬೇಡ್ಕರ್ ಜಗಜೀವನ ರಾಮ್ ಸಂಘದ ತಾಲೂಕ ಅಧ್ಯಕ್ಷರಾದ ಡಾ ಕೊಡ್ಲೆ ಮಲ್ಲಿಕಾರ್ಜುನ ಮೇಕೆಲಿ ದೊಡ್ಡ ವಿರೇಶಪ್ಪ ಚಿಕ್ಕಬಳ್ಳಾರಿ ನಾಗಪ್ಪ ಇವರು ಮಾತನಾಡಿ ಶೋಷಿತರ ಧ್ವನಿ ಧೀಮಂತ ನಾಯಕ ಸಮಾನತೆಗಾಗಿ ಭವ್ಯ ಭಾರತದ ಮಹಾನ್ ಸ್ವಾತಂತ್ರ್ಯದ ಹೋರಾಟಗಾರರು ಹಸಿರು ಕ್ರಾಂತಿಯ ಹರಿಕಾರರು ಅಪ್ಪಟ ಪ್ರಜಾಪ್ರಭುತ್ವವಾದಿ ಎಂದು ಗುಣಗಾನ ಮಾಡಿದರು ನಗರಸಭೆ ಮಾಜಿ ಸದಸ್ಯ ಚಿದಾನಂದ ರಾಯಡು ತಾಲೂಕ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಪವನ್ ಕುಮಾರ್ ಎಸ್. ದಂಡಪ್ಪನವರ್ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಶಾಂತಿ ಸಭೆ ಸದಸ್ಯ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಘವೇಂದ್ರವರ್ಮ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಕೆ.ಮಲ್ಲಿಕಾರ್ಜುನ ಬಿಸಿಎಂ ಹನುಮೇಶ್ ಶಶಿಧರ್ ಪಾಟೀಲ್ ನಗರಸಭೆ ಪೌರಾಯುಕ್ತರು ತಾಲೂಕ ತಹಸಿಲ್ದಾರ್ ಕಚೇರಿಯ ಎಫ್ ಡಿ ಎ ಮಹಾಂತೇಶ ಬೋವಿ ಸಂಘದ ಗಾಳೆಪ್ಪ ತೋಟಗಾರಿಕೆ ಕೃಷಿ ಅಬಕಾರಿ ಪಿಡಬ್ಲ್ಯೂಡಿ ಆರೋಗ್ಯ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತಿತರ ಗಣ್ಯ ವ್ಯಕ್ತಿಗಳು ದಲಿತ ಸಮಾಜದವರು ಸಾರ್ವಜನಿಕರಿದ್ದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















