ಸಿರುಗುಪ್ಪ – ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಉಪ್ಪಿನ ಸತ್ಯಾಗ್ರಹ ಒಂದು ಪ್ರಮುಖ ಮೈಲುಗಲ್ಲು ಎಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಶಾಂತಿ ಸಭೆ ಸದಸ್ಯರು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ಅವರು ಹೇಳಿದರು ಸಿರುಗುಪ್ಪ ನಗರದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಸರ್ಕಲ್ ನಲ್ಲಿ ಮಹಾತ್ಮಾ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಗೌರವ ನಮನ ಸ್ಮರಿಸಿದ ಅವರು ಮಾತನಾಡುತ್ತಾ 97ನೇ ಉಪ್ಪಿನ ಸತ್ಯಾಗ್ರಹ ದಿನವನ್ನು ನೆನಪಿಸಿ ಮಾತನಾಡಿ ಬ್ರಿಟಿಷರು ರೂಪಿಸಿದ ಕಾನೂನನ್ನು ಉಲ್ಲಂಘಿಸುವುದೇ ಇದರ ಉದ್ದೇಶವಾದ್ದರಿಂದ ಇದನ್ನು ಕಾನೂನು ಭಂಗ ಚಳವಳಿ ಎಂದೂ ಕರೆಯಲಾಗಿದೆ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಲು ಮಹಾತ್ಮ ಗಾಂಧಿ ಅವರು 1930 ರ ಮಾರ್ಚ್ 12ರಂದು ಸಬರಮತಿ ಆಶ್ರಮದಿಂದ ಪಾದಯಾತ್ರೆ ಮೂಲಕ 240 ಕಿ. ಮೀ. ನಡೆದು ದಂಡಿ ಎಂಬಲ್ಲಿಗೆ ತಲುಪಿದ್ದು 1930 ರ ಏಪ್ರಿಲ್ 6 ರಂದು ಹಾಗಾಗಿ ಇದನ್ನು ದಂಡಿ ಉಪ್ಪಿನ ಸತ್ಯಾಗ್ರಹ ಎಂದು ಕರೆಯಲಾಗುತ್ತದೆ ಜನಾಭಿಪ್ರಾಯ ಮುಖಂಡರು ಅಬ್ದುಲ್ ನಬಿ ಅವರು ವಿವರಿಸಿದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















