ಬೆಂಗಳೂರು: ದಿನಾಂಕ 11-4-2026 ಎರಡನೆಯ ಶನಿವಾರ ಆನಂದ ರಾವ್ ವೃತ್ತದ ಬಳಿಯಿರುವ ಕೆ ಪಿ ಟಿ ಸಿ ಎಲ್ ಲೆಕ್ಕಾಧಿಕಾರಿಗಳ ಸಂಘದ ವಾಗ್ದೇವಿ ಹಾಲ್ ನಲ್ಲಿ ಬೆಳಗ್ಗೆ 10 ಗಂಟೆಯಿಂದ, ಯೋಗ ಶಿಕ್ಷಕರಾಗಿ, ವ್ಯಕ್ತಿತ್ವ ವಿಕಸನ ತರಬೇತಿ ನೀಡುತ್ತಿರುವ, ಕ. ವಿ. ಪ್ರ. ನಿ. ನಿ ನಿವೃತ್ತ ಶ್ರೀ ರಾಮು ಅವರಿಂದ ಪರಿಪೂರ್ಣ ವ್ಯಕ್ತಿತ್ವ ವಿಕಾಸದ ಅಡಿಯಲ್ಲಿ ಯೋಗದ ಪಾತ್ರ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ಉಪನ್ಯಾಸವಿದ್ದು
ಕೆಂಪೇಗೌಡ ವೈದ್ಯ ವಿಜ್ಞಾನಗಳ ಸಂಸ್ಥೆಯಲ್ಲಿ ಕಳೆದ 29 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ, ರೋಗ ನಿರ್ಣಯ ವಿಷಯದಲ್ಲಿ ಅಪಾರ ಅನುಭವಿರುವ, ಅಮರನಾಥ ಯಾತ್ರೆಯನ್ನು ಎಂಟು ಬಾರಿ ಕಾಲುನಡಿಗೆಯಲ್ಲಿ ಪೂರೈಸಿರುವ ಡಾ. ಟಿ ಎಂ ಗಿರಿಧರ ಉಪಾಧ್ಯಾಯ ಅವರಿಂದ ವಿಶ್ವಗುರು ಭಾರತದ ಕಡೆಗೆ: ನಮ್ಮ ಕುಟುಂಬ, ನಮ್ಮ ಸಮಾಜ, ನಮ್ಮ ಕೊಡುಗೆ.
ಕುರಿತು ಉಪನ್ಯಾಸವನ್ನು ಏರ್ಪಡಿಸಲಾಗಿದೆ.
ಇದೇ ಸಂದರ್ಭದಲ್ಲಿ ಶಿವಗಂಗಾ ಡ್ಯಾನ್ಸ್ ಅಕಾಡೆಮಿಯ ವಿದುಷಿ ಆಶಾ ಕುಮಾರ್ ಹಾಗೂ ಅವರ ಶಿಷ್ಯೆಯರಿಂದ ಭರತನಾಟ್ಯ ಕಾರ್ಯಕ್ರಮ ವನ್ನು ಆಯೋಜಿಸಿದೆ ಎಂದು ಕಾರ್ಯಕ್ರಮ ಸಂಯೋಜಕ ಶ್ರೀ ವಿಶ್ವೇಶ್ವರ ಗಾಯತ್ರಿ ಅವರು ತಿಳಿಸಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ




















