ಕಾರಟಗಿ: ತಾಲೂಕಿನ ಸಿಂಗನಾಳ ಗ್ರಾಮದಲ್ಲಿ 27 ನೇ ವರ್ಷದ ದಿಗ್ವಿಜಯ ನವೋದಯ ಕೋಚಿಂಗ್ ತರಬೇತಿ ಕಾರ್ಯಕ್ರಮ ಹಾಗೂ ಕಟ್ಟಡಗಳ ಉದ್ಘಾಟನೆ ಪ್ರಾರಂಭೋತ್ಸವವನ್ನು, ಶಾಲಾ ಮಕ್ಕಳು ಪಾಲಕರು ಉದ್ಘಾಟನೆ ಮಾಡುವ ಮೂಲಕ 27ನೆಯ ವಾರ್ಷಿಕೋತ್ಸವವನ್ನು ಬಹಳ ಸಂಭ್ರಮದಿಂದ ಕಾರ್ಯಕ್ರಮವು ನೆರವೇರಿಸಿದರು.
ತಾಲೂಕಿನ ವಿವಿಧ ಶಿಕ್ಷಣ ಸಂಸ್ಥೆಗಳಿಗಿಂತ ಅತಿ ಹೆಚ್ಚು ಮಕ್ಕಳು ನವೋದಯ ಮತ್ತು ಮೊರಾರ್ಜಿ ಶಾಲೆಗೆ ಸಿಂಗನಾಳ ಗ್ರಾಮದ ದಿಗ್ವಿಜಯ ಕೋಚಿಂಗ್ ಸೆಂಟರ್ನಿಂದ ಹೆಚ್ಚು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ, ಮತ್ತು ವಿದ್ಯಾರ್ಥಿ ವೇತನದ ಸೌಲಭ್ಯ ಶಿಕ್ಷಕರು ಕೊಡಿಸಿದ್ದಾರೆ ಅವರಿಗೂ ಪಾಲಕರಿಂದ ಶಿಕ್ಷಕರ ವೃಂದಕ್ಕೆ ಅಭಿನಂದನೆಗಳನ್ನು ತಿಳಿಸಿದರು,
ವಿಶೇಷತೆ :
ಬಂದ ಪಾಲಕರಿಗೂ ಮಕ್ಕಳಿಗೂ ಸನ್ಮಾನಿಸಿ ಗೌರವಿಸಲಾಯಿತು. ಮಕ್ಕಳಿಗೆ ಪ್ರಥಮ ಬಹುಮಾನ 10,000 ಸಾವಿರ ನಗದು ಬಹುಮಾನ (60,000 ಶಿಷ್ಯವೇತನ ) ದ್ವಿತೀಯ ಬಹುಮಾನ ಐವತ್ತು ಸಾವಿರ, (7,500 ನಗದು ಬಹುಮಾನ 42500 ಶಿಷ್ಯವೇತನ) ತೃತೀಯ ಬಹುಮಾನ: 40,000 (5000 ನಗದು 35,000 ಶಿಷ್ಯ ವೇತನ) ಬಹುಮಾನ ಕೊಡುವ ಮೂಲಕ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ. ಶ್ರೀ ಪ್ರಮೀಳಾ ಡಿ.ಎಂ. ವಿಜಾಪುರ ತರಬೇತಿದಾರರು, ನಾಗರತ್ನಮ್ಮ ಬುಪೂರ. ಅಧ್ಯಕ್ಷರು, ಷಣ್ಮುಖಪ್ಪ ಪೂರ್ ಸಂಸ್ಥಾಪಕರು, ಜೀರಾಳ ಕಲ್ಗುಡಿ,, ಕೊಕ್ಕರಗೋಳ, ನಂದಳ್ಳಿ, ಆಗೋಲಿ, ತೊಂಡಿಹಾಳ, ಮರಲನಹಳ್ಳಿ, ಹಣವಾಳ್ ಕ್ಯಾಂಪ್, ಆಚಾರಿ ನರಸಾಪುರ, ಗಂಗಾವತಿ ಹಾಗೂ ಕಾರಟಗಿ ತಾಲೂಕಿನ ವಿವಿಧ ಗ್ರಾಮದ ಪಾಲಕರು ಆಗಮಿಸಿದರು, ವಿವಿಧ ಶಿಕ್ಷಣ ಸಂಸ್ಥೆಯಿಂದ ಶಿಕ್ಷಕರು, ಶಾಲಾ ಶಿಕ್ಷಕ ವೃಂದದವರು, ಸಹಾಯಕರು, ಮರಿಯಪ್ಪ, ಹನುಮಂತಪ್ಪ, ಮುಕ್ಕಾಲಪ್ಪ ಹಾಗೂ ಗ್ರಾಮದ ಹಿರಿಯರು ಮಹಿಳೆಯರು ಪಾಲಕರು ಯುವಕರು ಭಾಗಿಯಾಗಿದ್ದರು.
- ಕರುನಾಡ ಕಂದ ಪತ್ರಿಕೆ




















