ಭಕ್ತಿಯ ಬುತ್ತಿ ಹೊತ್ತುತಂದೆ.
ಮಾದಯ್ಯ ನೀ ಕಾಯೋ
ನಮ್ಮ ತಂದೆ.
ಅನುಗಾಲ ಅನುಕ್ಷಣವೇ
ಸ್ಮರಣೆ ನಿನದೆ ತಂದೆ.
ನಿನ್ನ ಗುಡಿಯ ಮುಂದೆ
ಕೈ ಮುಗಿದು ನಿಂದೆ.
ಕಷ್ಟದ ಕಡಲಲಿ ಬೇಯಲು ಬಿಡದೆ.
ನಡೆವ ಕಾಲಿಗೆಚುಚ್ಚು ಮುಳ್ಳುಗಳ
ಹುವಾಗಿಸಿನಡೆಸುವೆ ಗುರುವೇ ನೀ ಮುಂದೆ.
ನಿನ್ನ ದಯಾ ಬಲಒಂದೇ.
ಬದುಕುಳಿದಿರುವ ಜೀವ
ನಿನಗೆಂದೇ. ನಿತ್ಯ ನಾಮ
ಸ್ಮರಣೆ, ಜಪ- ತಪವು
ನೆನೆದೂ ಧನ್ಯಳಾದೆ ಇಂದೆ.
ಪವಿತ್ರ ಗಂಗೆಯಲಿ ಮಿಂದೆ.
ಮನಸಿನ ಕಲ್ಮಶ ಭಕ್ತಿಯಿಂದ
ತೊಳೆಯಲೆಂದೆ. ಜಗದಗಲ
ಮೆರೆಸುವ ನಿನ್ನ ನಾಮವೇ ಇನ್ಮುಂದೆ.
ಭೂಮ್ಯಾಕಾಶ, ಸೂರ್ಯ- ಚಂದ್ರ ಇರುವವರೆಗೂ ಮಾದಯ್ಯ ನಾಮ
ಜ್ಯೋತಿಯಾಗಿ ಧರೆಯಲಿ
ಬೆಳಗಲಿ ಎಂದೆಂದಿಗೂ
ಅಜರಾಮರವಾಗಲೆಂದೇ.
- ಭಾನುಮತಿ ವಿ. ಕನಕಪುರ




















