ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶ್ರೀ ಮುತ್ತು ವಡ್ಡರ ಗವಿಮಠ ಪ್ರತಿಷ್ಠಾನದ ವೃತ್ತಿ ಪ್ರವೃತ್ತಿ ಪ್ರಶಸ್ತಿಗೆ ಆಯ್ಕೆ.

ಕನ್ನಡ ಸಾಹಿತ್ಯ ಪರಿಷತ್ತು ಬಾಗಲಕೋಟೆ, ಗವಿಮಠ ಪ್ರತಿಷ್ಠಾನ ಮಧುರಖಂಡಿ, ಕನ್ನಡ ಸಾಹಿತ್ಯ ಪರಿಷತ್ತು ಜಮಖಂಡಿ ಹಾಗೂ ಹುನಗುಂದ- ಇಲಕಲ್ ಇವರ ಸಹಯೋಗದಲ್ಲಿ ದಿನಾಂಕ 12-04-2026 ರವಿವಾರ ಜಮಖಂಡಿಯಲ್ಲಿ ನಡೆಯಲಿರುವ ಶಿಕ್ಷಕ ಶಿಕ್ಷಕಿಯರಿಗೆ ಗೌರವ ಪ್ರಶಸ್ತಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಹುನಗುಂದ ತಾಲೂಕಿನ ಹಿರೇಮಳಗಾವಿ ಗ್ರಾಮದ ಗಣಿತ ಶಿಕ್ಷಕರಾಗಿರುವ ಶ್ರೀ ಮುತ್ತು ವಡ್ಡರ ಇವರ ಶೈಕ್ಷಣಿಕ ಹಾಗೂ ಸಾಹಿತ್ಯ ಸೇವೆಯನ್ನು ಪರಿಗಣಿಸಿ ವೃತ್ತಿ ಪ್ರವೃತ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ವೃತ್ತಿಯಲ್ಲಿ ಶಿಕ್ಷಕರಾಗಿರುವ ಶ್ರೀ ಮುತ್ತು ವಡ್ಡರ ಅವರು ಪ್ರವೃತ್ತಿಯಲ್ಲಿ ಸಾಹಿತ್ಯ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಹಾಗೂ ಅತಿ ಸರಳ ಗಣಿತ, ಎಲೆಮರೆಕಾಯಿಗಳು, ಸನ್ಮಾರ್ಗದ ದುಂಬಿ ಮತ್ತು ಬಿಡುಗಡೆಗೆ ಸಜ್ಜಾಗಿರುವ ಬದಲಾಗು ನೀ ಬೆಳಕಾಗು ನೀ ಎಂಬ ಸ್ಫೂರ್ತಿದಾಯಕ ಕೃತಿಗಳನ್ನು ರಚಿಸಿದ್ದಾರೆ. ಜೊತೆ ಜೊತೆಗೆ ನಾಡಿನ ಹಲವಾರು ಪತ್ರಿಕೆಗಳಿಗೆ ಕಥೆ, ನ್ಯಾನೋ ಕಥೆಗಳು, ಲೇಖನ ಹಾಗೂ ಕವನಗಳನ್ನು ಬರೆದು ಪ್ರಕಟಿಸಿದ್ದಾರೆ, ಇವರು ಪ್ರತಿನಿತ್ಯ ವ್ಯಾಟ್ಸಪ್ ಬಳಗದಲ್ಲಿ ಸುಮಾರು 6,000 ಜನರಿರುವ ಜ್ಞಾನಜ್ಯೋತಿ ದಿನಂಪ್ರತಿ ಎಂಬ ಬಳಗದಲ್ಲಿ ಪ್ರತಿನಿತ್ಯ ರಸಪ್ರಶ್ನೆ ಕಾರ್ಯಕ್ರಮ ನಡೆಸುತ್ತಿದ್ದಾರೆ. ಇವರ ಶೈಕ್ಷಣಿಕ ಹಾಗೂ ಸಾಹಿತ್ಯ ಸೇವೆಯನ್ನು ಪರಿಗಣಿಸಿ 2026ರ ಗವಿಮಠ ಪ್ರತಿಷ್ಠಾನದ ವೃತ್ತಿ ಪ್ರವೃತ್ತಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಶಿಕ್ಷಕ ಮುತ್ತು ವಡ್ಡರ ಅವರಿಗೆ ಹಾಗೂ ಶಿಕ್ಷಕ ಬಳಗಕ್ಕೆ ಮತ್ತು ಊರಿನ ಗುರು ಹಿರಿಯರಿಗೆ ಸಂತಸವಾಗಿದೆ.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!