ಚಿಟಗುಪ್ಪಾ : ಬೀದರ ಜಿಲ್ಲೆಯ ಹುಮನಾಬಾದ್ ವಿಧಾನಸಭಾ ಮತಕ್ಷೇತ್ರದ ತಾಲೂಕು ಕೇಂದ್ರವಾದ ಚಿಟಗುಪ್ಪಾ ನೂತನ ವಿಧಾನಸಭಾ ಮತಕ್ಷೇತ್ರವಾಗಿ ರಚನೆಯಾಗಬೇಕೆಂದು ಸಾಹಿತಿ , ಪರಿಸರ ಸಂರಕ್ಷಕರು, ಹೋರಾಟಗಾರರಾದ ಸಂಗಮೇಶ ಎನ್ ಜವಾದಿ ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಗುರುವಾರ ದಂದು ಪತ್ರಿಕಾ ಪ್ರಕಟಣೆಯ ಮೂಲಕ ಈ ವಿಷಯ ತಿಳಿಸಿದ ಸಂಗಮೇಶ ಎನ್ ಜವಾದಿ ರವರು, ಚಿಟಗುಪ್ಪಾ ಪಟ್ಟಣವು ಕಳೆದ 50 ವರ್ಷಗಳಿಂದ ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದು, ಅನೇಕ ತಾಲೂಕು ಕಛೇರಿಗಳು ಕಾರ್ಯ ನಿರ್ವಹಿಸುತ್ತಿವೆ.
ಕಾರಣ ಈ ಭಾಗವು ಸರ್ವಾಂಗಿಣವಾಗಿ ಅಭಿವೃದ್ಧಿ ಹೊಂದಲು ಚಿಟಗುಪ್ಪಾ ಪಟ್ಟಣವನ್ನು ಕೇಂದ್ರವಾಗಿರಿಸಿಕೊಂಡು ಈಗಿನ ಹುಮನಾಬಾದ್ ವಿಧಾನಸಭಾ ಕ್ಷೇತ್ರದ ಕೆಲವು ಗ್ರಾಮಗಳನ್ನು, ಪಕ್ಕದ ಬೀದರ್ ದಕ್ಷಿಣ ವಿಧಾನಸಭಾ ಮತಕ್ಷೇತ್ರದ ಕೆಲವು ಹಳ್ಳಿಗಳನ್ನು ಸೇರಿಸಿಕೊಂಡು ನೂತನ ವಿಧಾನಸಭಾ ಕ್ಷೇತ್ರ ಮಾಡುವುದು ಸೂಕ್ತವಾಗಿದೆ ಹಾಗೂ ಅಭಿವೃದ್ಧಿ ಹಿತದೃಷ್ಟಿಯಿಂದ ಇದು ಆದಷ್ಟು ಬೇಗನೆ ಆಗಬೇಕು ಆದರೆ ಒಳ್ಳೆಯದು. ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ವಿಧಾನಸಭಾ ಪುನರವಿಂಗಡಣಾ ಆಯೋಗಗಳು ನೂತನ ವಿಧಾನಸಭಾ ಮತಕ್ಷೇತ್ರಗಳ ರಚನೆಯ ಸಂದರ್ಭದಲ್ಲಿ ಚಿಟಗುಪ್ಪಾ ವಿಧಾನಸಭಾ ಮತಕ್ಷೇತ್ರ ರಚನೆಗೆ ಪ್ರಥಮ ಆದ್ಯತೆ ನೀಡಬೇಕೆಂದು ಈ ಮೂಲಕ ಸಂಗಮೇಶ ಎನ್ ಜವಾದಿ ರವರು ರಾಜ್ಯ, ಕೇಂದ್ರ ಸರ್ಕಾರಕ್ಕೆ ಹಾಗೂ ಪುನರವಿಂಗಡಣಾ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದಾರೆ.
- ಕರುನಾಡ ಕಂದ ಪತ್ರಿಕೆ




















