ನೋಡಿ ತಿಳಿ ಮಾಡಿ ಕಲಿ
ನುಡಿಮುತ್ತುಗಳ ಸಾಲಿನಲಿ
ಮೂರು ಸಂವತ್ಸರದ ಕೈಚಳಕದಲಿ
ಮೊಮ್ಮಗಳು ಧ್ವನಿ ತನ್ಮಯತೆಯಲಿ
ಸಾರುತಿಹಳು ಕಿವಿಮಾತುಗಳ ಎಳೆಯರಲಿ
ಪರಿಸರದ ಪ್ರಭಾವ ಮಕ್ಕಳ ಹೃನ್ಮನದಲಿ
ಅರಳುವುದು ಚೈತನ್ಯ ಪ್ರತೀ ಕ್ಷಣದಲಿ
ಇರುವುದು ಲವಲವಿಕೆ ಸದಾ ಕಾಲದಲಿ
ಸೆರೆಹಿಡಿದು ಬಣ್ಣಿಸಿಹೆ ಲಘು ಕಾವ್ಯದಲಿ
ರವಾನಿಸುತಿರುವೆ ನಲ್ಮನಗಳಿಗೆ ಶುಭ ಬೆಳಗಿನಲಿ
- ಲಲಿತಾ ಕೆ ಆಚಾರ್ ಬೆಂಗಳೂರು




















