ತಿಳಿ ನೀರ ಬದುಕಿನಲಿ ನಿನ್ನೊಲವು
ತುಂಬಿ ಬರಲಿ ಬಾನಿನಲಿ ಎಳೆ
ನಗೆಯು ಚಂದಿರನ
ನಗೆ ಹಸಿಯು ತೇಲಿ ಬರಲಿ ಮನದ
ಆಸೆಗಳು ಎಂದೆಂದಿಗೂ
ನನಸಾಗುವಂತಿರಲಿ ಗೆಳೆತನದ ಚೆಲವು
ವಿರಸವಾಗದಿರಲಿ ಜೀವನವೆಂಬ ರಥದ ಕನಸು
ನಂದನವಾಗಿರಲಿ ಹಾಲ್ನೋರೆಯ ಮನವು
ಬತ್ತದಿರಲಿ ಉರಿಯುತ್ತಿರುವ ಬೆಂಕಿಯ ಜ್ವಾಲೆಯು
ಆರುವಂತಿರಲಿ ಇರುಳು ಸುಂದರ
ಬದುಕಿನಲಿ ಉತ್ಸವದ
ಒಸಗೆಯು ತುಂಬಿ ಬರಲಿ
ನೊಂದ ಬಾಳಿನಲಿ ಸಂತಸದ ಸುಧೆ
ಹರಿದರಿದು ಬರಲಿ ಗೆಳತಿ.
ರಚನೆ : ರಾಘವೇಂದ್ರ ಎಸ್ ಎ




















