ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಣ್ಣಿಗೆ ಕಾಣುವ ದೇವರು… ಅವ್ವ

ಸಿಂಹಾಸನವಾಯಿತು ತಾಯಿಯ ಮಡಿಲು
ಪಲ್ಲಕ್ಕಿ ಆಯಿತು ಅವ್ವನ ಹೆಗಲು

ತಾಯಿಯ ಪಾದದ ಅಡಿಯೇ ಸ್ವರ್ಗವು
ಅವ್ವನ ಕಂಗಳೇ ನಮಗೆ ನಿಸರ್ಗವು

ಉಣಿಸಿದ ಹಾಲು ಪಂಚಾಮೃತವು
ತಿದ್ದಿದ ಅಕ್ಷರ ಬದುಕಿನ ಗೆಲುವು

ಅವ್ವನ ಮಾತೆ ವೇದ ವಾಕ್ಯವು
ಅವ್ವನ ಬೈಗುಳವದು ಶ್ರೀರಕ್ಷೆಯು

ತಾಯಿ ನೀಡಿದ ತುತ್ತು ಮೃಷ್ಟಾನ್ನವು
ಕಣ್ಣೀರೊರೆಸಿದ ಸೆರಗೇ ಸ್ವರ್ಗವು

ಅವ್ವನು ಕಣ್ಣಿಗೆ ಕಾಣುವ ದೇವರು
ಅವ್ವ ಪದವೇ ಶುದ್ಧ ಕಲ್ಪತರು

ಹುಣ್ಣಿಮೆ ಬೆಳಕು ಅವ್ವನ ನೋಟ
ನವಿಲಿನ ನರ್ತನ ನಗುವಿನ ಮಾಟ

ಅವ್ವನ ಭಾಷೆಯ ಅಮೃತದಾ ನುಡಿ
ಅವ್ವಗೆ ಜಗವೇ ತನ್ನ ಕರುಳ ಕುಡಿ

ಅವ್ವನ ಮುತ್ತು ಸಿಹಿ ಸಿಹಿ ತುತ್ತು
ಅವ್ವನು ಬಳಿಯಿರೆ ಬರದಾಪತ್ತು

ಅವ್ವ ನಡೆದ ದಾರಿಯೇ ಸನ್ಮಾರ್ಗವು
ಅವಳು ತೋರಿಸಿದ ಮಾರ್ಗವೆ ಸ್ವರ್ಗವು

ಅವ್ವ ಇದ್ದಾಗ ನಮಗೆ ದೇವರು
ಅವ್ವ ಇಲ್ಲದಿದ್ದಾಗ ಊರಿಗೆ ದೇವರು

ಅವ್ವನೇ ನಮಗೆ ವಿಶ್ವವಿದ್ಯಾಲಯ
ಅವ್ವನಿರುವ ಮನೆಯೇ ದೇವಾಲಯ

ತಿಳಿಯಿರಿ ತಾಯಿಯೇ ಮೊದಲ ಗುರು
ತಾಯಿಗೆ ಸಮ ಮುಕ್ಕೋಟಿ ದೇವರು

ಅವ್ವ ಇರುವ ಸ್ಥಳ ದೇವ ಮಂದಿರ
ಅವ್ವ ಸಾನ್ನಿಧ್ಯವೇ ಗುಡಿ ಗೋಪುರ

ಅವ್ವನ ಲಾಲಿ ಕೋಗಿಲೆ ಸ್ವರವು
ತೂಗಿದ ತೊಟ್ಟಿಲು ಅರಮನೆ ಸುಖವು

  • ಶ್ರೀ ಮುತ್ತು ಯ. ವಡ್ಡರ (ಶಿಕ್ಷಕರು)
    HPS, ಹಿರೇಮಳಗಾವಿ
    ಬಾಗಲಕೋಟೆ -9845568484
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!