ಕೆಂಬಣ್ಣದ ಕವಚದ ಸುತ್ತಲಿದೆ ಪಚ್ಚೆಮಿಶ್ರ ಗರಿ
ಬಿಡಿಸಿನೋಡಲು ಒಳಗೊಂದು ಶ್ವೇತ ಗೋಲಿ
ಅಡಗಿ ಕುಳಿತಿದೆ ಉದರದಲೊಂದು ಗೋಡಂಬಿ ಬೀಜ
ಕರೆವರಿದನು ಉಷ್ಣ ವಲಯದ ರಾಂಬುಟಾನ್ ಲಿಚ್ಚಿ
ಕೇರಳದ ಕೊಟ್ಟಾಯಂ ಪ್ರದೇಶದಿ ಬೆಳೆವ ಹಣ್ಣು
ಆಯಸ್ಕಾಂತದಂತೆ ಸೆಳೆವುದು ನೋಡುಗರ ಕಣ್ಣು
ಇದರ ಬೆಲೆ ಕೇಳಿದರೆ ಆಗುವುದು ಕೈ ಹುಣ್ಣು
ಬಾಯಲಿಟ್ಟರೆ ಸಕ್ಕರೆಯಂತೆ ರುಚಿಕರ ಗಿಣ್ಣು
ಫಲದ ಆಚೀಚೆ ಕತ್ತರಿಸಿರುವ ಹೋಳುಗಳಲಿ
ನೆತ್ತಿಯಮೇಲೆ ಸೇರಿಸಿರುವ ತ್ರಿವಳಿ ಬೀಜಗಳಲಿ
ಸಿಂಗಾರದಿ ತುಂಬೆ ಜೊತೆಗೆ ಹಸಿರೆಲೆ ಗರಿಗಳಲಿ
ಮೂಡಿಸಿಹ ಕಾವ್ಯ ಚಿತ್ತಾರವ ದೃಷೀಕರಿಸಿಹಳು ಮೊಮ್ಮಗಳು
- ಲಲಿತಾ ಕೆ ಆಚಾರ್, ಬೆಂಗಳೂರು




















