ಮಡಿಕೇರಿ: ಜೋಡುಪಾಲ ಮೂಲದ, ಪ್ರಸ್ತುತ ಜಂಬೂರಿನಲ್ಲಿ ವಾಸವಾಗಿದ್ದ ಹಿರಿಯ ನಾಗರಿಕರಾದ ಎನ್.ಆರ್. ಸತ್ಯನಾರಾಯಣ (75 ವರ್ಷ) ಅವರು ಇಂದು ಮಡಿಕೇರಿಯಲ್ಲಿ ನಿಧನರಾಗಿದ್ದಾರೆ.
ಮೃತರ ಪಾರ್ಥಿವ ಶರೀರವನ್ನು ಸಮಾಜಮುಖಿ ಕಾರ್ಯ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ಸಂಶೋಧನೆಗಾಗಿ ಮಡಿಕೇರಿಯ ವೈದ್ಯಕೀಯ ಕಾಲೇಜಿಗೆ (Medical College) ಹಸ್ತಾಂತರಿಸಲು ಅವರ ಕುಟುಂಬಸ್ಥರು ನಿರ್ಧರಿಸಿದ್ದಾರೆ. ಮೃತರ ಈ ನೇತ್ರದಾನ/ದೇಹದಾನದ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಶ್ಲಾಘನೆ ವ್ಯಕ್ತವಾಗಿದೆ.
ವರದಿ : ಪ್ರಿತುನ್ ಪೂವಣ್ಣ




















