ಕಲಾವಿಧರ ಕೈ ಚಳಕಕ್ಕೂ ಮೀರಿದ ಅದ್ಭುತ ಕಲೆ
ಯಾವುದೆ ಕಾಲಕ್ಕೂ ಯಾರೂ ಕಟ್ಟಲಾಗದು ಬೆಲೆ
ಇದುವೇ ನಿಸರ್ಗ ಮಾತೆಯ ಸೃಷ್ಟಿಯ ಬಲೆ
ಎಲ್ಲೆಡೆಯೂ ಪಸರಿಸಿ ಮನಸೆಳೆವುದು ಇದರ ಅಲೆ
ಹಸಿರಲೆಯಲಿ ಕಂದು ಕೆಂಪಲಿ ಹಳದಿ ವರ್ಣಗಳ ಸೆಲೆ
ಬಣ್ಣಿಸಲು ಅಸದಳ ವಿಸ್ಮಯಗಳ ಮೂಲದ ನೆಲೆ
ಪರಸ್ಪರ ಆಸ್ವಾದಿಸುತ ನಮಿಸುವ ಮನದಲೆ
ಸುಲಲಿತ ಕಾವ್ಯ ಚಿತ್ತಾರದ ಶುಭ ಮುಂಜಾವಿನಲೆ
- ಲಲಿತಾ ಕೆ ಆಚಾರ್, ಬೆಂಗಳೂರು




















