ಮಡಿಕೇರಿ : ಕರ್ನಾಟಕ ರಕ್ಷಣಾ ವೇದಿಕೆ ಮಡಿಕೇರಿ ತಾಲೋಕು ಅಧ್ಯಕ್ಷರಾದ ಶ್ರೀ ಪ್ರವೀಣ್ ಡಿಂಗ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಮಹಿಳಾ ಸಂಚಾಲಕಿ ಹಾಗೂ ಜಿಲ್ಲಾ ಉಸ್ತುವಾರಿ ಶ್ರೀಮತಿ ದೀಪಾ ಪೂಜಾರಿಯವರ ಸೂಚನೆಯಂತೆ ಸಭೆ ನಡೆಯಿತು.
ಮಡಿಕೇರಿಯ ಉಡುಪಿ ಗಾರ್ಡನ್ ಪಾರ್ಟಿ ಹಾಲ್ ನಲ್ಲಿ ನೆಡೆದ ಕಾರ್ಯಕ್ರಮ ಜಿಲ್ಲಾ ಪ್ರದಾನ ಕಾರ್ಯದರ್ಶಿಯವರ ತಂಡದ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಜಿಲ್ಲಾ ಸಂಚಾಲಕರಾದ ಗೋವಿಂದರಾಜ್ ದಾಸ್ ಎಲ್ಲರನ್ನೂ ಸ್ವಾಗತಿಸಿದರು. ಜಿಲ್ಲಾ ಮಹಿಳಾ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಕುದುಪಜೆ ಸಂಘಟನೆ ನಡೆದು ಬಂದ ಹಾದಿಯನ್ನು ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷರು ಶ್ರೀ ಮುನೀರ್ ಮಾಚಾರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು :
- ಪ್ರವೀಣ್ ಡಿಂಗ – ಅಧ್ಯಕ್ಷರು
- ರಘು- ಉಪಾಧ್ಯಕ್ಷರು
- ಜಯಪ್ರಕಾಶ್ _ಪ್ರಧಾನ ಕಾರ್ಯದರ್ಶಿ
- ಶರೀಫ್ _ಗೌರವಾಧ್ಯಕ್ಷರು
- ಪಿ ಎ ಜೋಸ್- ಸಂಚಾಲಕರು
6.ಸಿಯಾಬುದ್ದೀನ್_ಉಪಾಧ್ಯಕ್ಷರು - ಫೈಯಾಜ್ – ನಗರ ಅಧ್ಯಕ್ಷರು
- ನನೂತ – ಮಹಿಳಾ ಉಪಾಧ್ಯಕ್ಷರು
- ಶಿಲ್ಪ _ಪ್ರಧಾನ ಕಾರ್ಯದರ್ಶಿ
- ಸರಿತಾ _ಸಂಚಾಲಕರು
- ಹೇಮಲತಾ_ಸಂಘಟನಾ ಕಾರ್ಯದರ್ಶಿ
- ದೀಪ್ತಿ – ಕಾರ್ಮಿಕ ಘಟಕದ ಮಹಿಳಾಧ್ಯಕ್ಷೆ
ಸಂಘಟನೆಯ ಬಲವರ್ಧನೆ, ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳು, ಹಾಗೂ ಕನ್ನಡ ನಾಡು, ನುಡಿ ಮತ್ತು ನೆಲ_ಜಲದ ಪರವಾಗಿ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಕರವೇ ಕೊಡಗು ಜಿಲ್ಲಾ ಮತ್ತು ತಾಲ್ಲೂಕು ಪದಾಧಿಕಾರಿಗಳು ಹಾಜರಿದ್ದರು.




















