ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರೈತರು ಬರಗಾಲಕ್ಕೆ ಸಿಲುಕಿದ್ದು, ಕೂಡಲೇ ಸಾಲ ಮನ್ನಾ ಮಾಡುವ ಜೊತೆಗೆ ಎಕರೆಗೆ 30 ಸಾವಿರ ಪರಿಹಾರ ನೀಡಬೇಕೆಂದು ರಾಜ್ಯ ನಾಯಕ ಒತ್ತಾಯ.

ಬಳ್ಳಾರಿ / ಕಂಪ್ಲಿ: ರಾಜ್ಯದ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ರೈತರು, ಬಡ ಜನರು ರೋಸಿ ಹೋಗಿದ್ದು, ಬರುವ ದಿನದಲ್ಲಿ ತಕ್ಕಪಾಠ ಕಲಿಸಲು ಮುಂದಾಗಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯ ಕಾರ್ಯಾಧ್ಯಕ್ಷ ರಾಜುನಾಯಕ ಗುಡುಗಿದರು.
ಪಟ್ಟಣದ ಅತಿಥಿ ಗೃಹದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಂಪ್ಲಿ ತಾಲೂಕು ಸೇರಿದಂತೆ ರಾಜ್ಯದ ಬಹುತೇಕ ತಾಲೂಕುಗಳಲ್ಲಿ ಬರ ಆವರಿಸಿದ್ದು, ಇದರಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ. ರಾಜ್ಯ ಸರ್ಕಾರ ನೆಪಕ್ಕೆ ಮಾತ್ರ ಬರ ಪೀಡಿತ ತಾಲೂಕುಗಳೆಂದು ಘೋಷಿಸಿದೆ ಹೊರತು ಪರಿಹಾರ ನೀಡಲು ಮುಂದಾಗಿಲ್ಲ. ಆದ್ದರಿಂದ ಕೂಡಲೇ ರಾಜ್ಯ ಸರ್ಕಾರ ಬರ ಪೀಡಿತ ತಾಲೂಕುಗಳ ಪ್ರತಿ ರೈತರ ಎಕರೆಗೆ ಸುಮಾರು 30 ಸಾವಿರ ರೂ.ಗಳ ಪರಿಹಾರ ನೀಡಬೇಕು. ಮತ್ತು ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಬರೀ ರೈತರ ಜಪ ಮಾಡುವುದಲ್ಲ. ಬದಲಾಗಿ ಅವರ ಕಷ್ಟದಲ್ಲಿ ಭಾಗಿಯಾಗಿ ಪರಿಹಾರ ನೀಡಿದಾಗ ಮಾತ್ರ ರೈತರ ಬದುಕು ಉತ್ತಮವಾಗಿರುತ್ತದೆ ಎಂದರು.
ಕAಪ್ಲಿಯಲ್ಲಿ ನಿರ್ಮಿಸಿದ ಮಿನಿವಿಧಾನಸೌಧವು ಕಳಪೆಯಿಂದ ಕೂಡಿದೆ. ಬಸಿ ನೀರು ಬರುವ ಜಾಗದಲ್ಲಿ ಮಿನಿ ವಿಧಾನಸೌಧ ಮಾಡಲಾಗಿದೆ. ಇದರಲ್ಲಿ ಗುಟಮಟ್ಟ ಇಲ್ಲದಮನತಾಗಿದ್ದು, ಬಹಳ ವರ್ಷ ಬಾಳಿಕೆ ಬರುವುದಿಲ್ಲ. ಈಗಾಗಲೇ ವರ್ಷಾನು ವರ್ಷಗಳೇ ಕಳೆಯುತ್ತಿದ್ದರೂ, ಸ್ಥಳೀಯ ಶಾಸಕರು ಉದ್ಘಾಟನೆ ಮಾಡದೇ, ಪಾಳು ಬೀಳುವಂತೆ ಮಾಡಿದ್ದಾರೆ. ಇಲ್ಲಿನ ಅತಿಥಿ ಗೃಹದ ಬಳಿಯಲ್ಲಿ ಅತಿಥಿ ಗೃಹದ ನೂತನ ಕಟ್ಟಡ ನಿರ್ಮಿಸಿ, ಕಾಮಗಾರಿ ಮುಗಿದು, ವರ್ಷಗಳೇ ಕಳೆದರೂ, ಉದ್ಘಾಟನೆ ಭಾಗ್ಯ ಇಲ್ಲದಂತಾಗಿದೆ. ಮತ್ತು ಬಹು ವರ್ಷದ ಬೇಡಿಕೆಯಾಗಿರುವ ಕಂಪ್ಲಿ ಹೊಸ ಸೇತುವೆಗೆ ಕಾಂಗ್ರೆಸ್ ಸರ್ಕಾರ ಮನಸ್ಸು ಮಾಡುತ್ತಿಲ್ಲ. ಡಿಪಿಆರ್ ಹಂತ ಸೇರಿದಂತೆ ಇನ್ನಿತರ ಕಾರಣಗಳ ನೆಪವೊಡ್ಡಿ, ಜನರಿಗೆ ಮಂಕುಬೂದಿ ಹಚ್ಚತ್ತಿದ್ದಾರೆ. ಪ್ರತಿ ಬಾರಿ ಪ್ರವಾಹದಿಂದಾಗಿ ಸೇತುವೆ ಮುಳುಗಿ, ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಈ ಬಾರಿ ಬರಗಾರ ಎದುರಾಗಿದ್ದು, ನೆಪ ಹೇಳುವುದನ್ನು ಬಿಟ್ಟು ಸ್ಥಳೀಯ ಶಾಸಕರು ಮತ್ತು ರಾಜ್ಯ ಸರ್ಕಾರ ಈ ಭಾಗದ ರೈತರ, ಜನರ, ವಾಹನ ಸವಾರರ ಸಂಚಾರದ ಹಿತದೃಷ್ಟಿಯಿಂದ ನೂತನ ಸೇತುವೆಗೆ ಅಡಿಗಲ್ಲು ಹಾಕಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಳ್ಳಾರಿ ನಗರ ಘಟಕ ಅಧ್ಯಕ್ಷ ಹೊನ್ನೂರಸ್ವಾಮಿ, ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ವಸಂತಕುಮಾರ, ಕಂಪ್ಲಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಹೆಚ್.ಮೇಘರಾಜ್, ಪ್ರಧಾನ ಕಾರ್ಯದರ್ಶಿ ಜಗದೀಶ ಪೂಜಾರ, ನಗರ ಘಟಕ ಅಧ್ಯಕ್ಷ ಇರ್ಫಾನ್ ಗುತ್ತಿ, ಮುಖಂಡರಾದ ಮಂಜುನಾಥ ಕುಕನೂರು, ಹಳ್ಳಿಗುಡಿ ಹನುಮಂತಪ್ಪ, ಬೇವೂರು ಈರಣ್ಣ, ವಿರುಪಾಕ್ಷಿ, ನಿಂಗಪ್ಪ, ವಿರೇಶ, ರಾಜೇಶ, ಸಂಗೇಶ, ಕೊಂಡಯ್ಯ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!