ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮರೆಯಾದ ಮಹಾತ್ಮ

ದೂರದ ಕಾರ್ಗತ್ತಲ ಕಪ್ಪು ನೆಲದ ಕರಿಯರ ಆಕ್ರಂದನಕೆ ಕರಗಿ ಅವರ ಕನಸ ನನಸಾಗಿಸಿದ ದಿಟ ಛಲದಂಕ ಮಲ್ಲ ನೀನೂ…

​ನೂರಾರು ವರುಷಗಳಿಂದ ಪರಂಗಿಗಳ
ಪಂಜರದಲ್ಲಿ ಸಿಲುಕಿದ ಭಾರತ ಮಾತೆಯ,
ಬಂಧಮುಕ್ತಗೊಳಿಸಲು ಬೀದಿಗಿಳಿದ
ದಿಟ ಬಂಧು ನೀನು.
​
ಬಂದೂಕು, ತುಪಾಕಿ ಇಲ್ಲದೆ ಸಮರದಲಿ,
ಸತ್ಯ-ಅಹಿಂಸೆಯೆಂಬ ಅಂಗಡಿಯಲಿ ಆಯುಧವಾಗಿ ಅಹಂಕಾರದ ಕೋಟೆ ಕಡಿದು ಜಗಕೆ ಶಾಂತಿ ತೋರಿದ ಧೂತ ನೀನು..

ಬರಿಗೈಯ ಅರೆಬೆತ್ತಲೆಯ ಫಕೀರಿ ನೀ ಸಾಗಿತೆಂದರೆ
ಜನಸಾಗರದ ದಂಡೆ ದಂಡು…
ಸತ್ಯದ ಹಾದಿಯಲಿ ನಡೆದ ಆ ಹೆಜ್ಜೆಗೆ ಜಗವೇ ತೆಯ್ವುದು ಮುಂಡು!

​ಬರಿಗಾಲ ಹಾದಿಯಲ್ಲಿ ಬೆಳಕಿನ ಬಾವುಟವೆತ್ತಿ,
ತನಗೇನೂ ಬಯಸದ ಸದ್ಗುಣ ಸತ್ಯದ ಪಯಣಿಗನಿಗೆ
ಸೇವೆಯೊಂದೇ ಉಸಿರು…

ಭರತಮಾತೆಯ
ಮುಕುಟ ಮಣಿ ಕರಮಚಂದನೇ ನಿನಗ್ಯಾಕೆ ಇಂದೂ ಸಲ್ಲದ ಬಿಗುಮಾನ…

ಯುಗ ಯುಗಗಳೇ ಕಳೆದರೂ ಸತ್ವ ನಮನ ನಿನಗೆ ! ಆದರೂ
ನಿನ್ನ ರಕ್ತ ಹೀರಿದ ಗೋಡ್ಸೆಗಿಂದು ಸನ್ಮಾನ,

ಇಂದಿನ ನಾಟಕದ ಜಗದಲಿ,ತತ್ವಗಳನ್ನು ಕಾಲಡಿಗೆ ನೂಕೀ ಅಧಿಕಾರದ ತೆವಲಿಗೆ ಮಾತ್ರ ಬಳಕೆಯಾದೆ
ನೀನು…

ಇಂದು ಕೇವಲ ನೋಟಿಗೆ ಸೀಮಿತವಾಗಿ ಮರೆಯಾಗುತಿರುವ
ಮಹಾತ್ಮನೇ ನಿನಗೆ ಶರಣು…..

  • ಡಾ.ಸುರೇಶ್.ಎಸ್. ವಡಗಲಪುರ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!